ಪಾಕಿಸ್ತಾನದ ದೇಗುಲಕ್ಕೆ 215 ಹಿಂದುಗಳ ಗುಂಪಿನ ಭೇಟಿ!

masthmagaa.com:

ಭಾರತ, ಅಮೆರಿಕ, ಗಲ್ಫ್​ ವಲಯದ ದೇಶಗಳ ಹಿಂದೂಗಳ ಗುಂಪೊಂದು ಪಾಕಿಸ್ತಾನದಲ್ಲಿರೋ 100 ವರ್ಷಗಳಷ್ಟು ಹಳೆಯ ಮಹಾರಾಜ್ ಪರಮಹಂಸ ಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತದಿಂದ 200, ಗಲ್ಫ್ ಅಮೆರಿಕ ಭಾಗದಿಂದ 15 ಮಂದಿ ಭಕ್ತರಿದ್ದ ಈ ಗುಂಪಿಗೆ, ಪಾಕ್ ಸರ್ಕಾರದಿಂದ ಬಿಗಿಭದ್ರತೆ ಒದಗಿಸಲಾಗಿತ್ತು. ಪಾಕಿಸ್ತಾನಿ ಹಿಂದು ಕೌನ್ಸಿಲ್ ಕಡೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಖೈಬರ್ ಪಖ್ತುಂಕ್ವಾದ ಕಾರಕ್ ಜಿಲ್ಲೆಯಲ್ಲಿರೋ ಸಮಾಧಿ ಸ್ಥಳ ಇದಾಗಿದೆ. 2020ರಲ್ಲಿ ಮೂಲಭೂತವಾದಿಗಳ ಗುಂಪು ಇದ್ರ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ರು. ಇದಾದ ಬಳಿಕ ಕಳೆದ ವರ್ಷ ಇದನ್ನು ನವೀಕರಣಗೊಳಿಸಲಾಗಿತ್ತು.

-masthmagaa.com

Contact Us for Advertisement

Leave a Reply