ಪಾಕ್‌: ಸುಪ್ರೀಂ ಕೋರ್ಟ್‌ ತಡೆಯಿದ್ರೂ ಎರಡು ಹಿಂದೂ ದೇವಾಲಯಗಳ ಧ್ವಂಸ!

masthmagaa.com:

ಪಾಕ್‌ನಲ್ಲಿ ಹಿಂದೂ ಸಮುದಾಯದ ಮೇಲೆ ದೌರ್ಜನ್ಯ ನಡೆಸ್ತಿರೋದಕ್ಕೆ ಮತ್ತೊಂದು ಎಕ್ಸಾಂಪಲ್‌ ವರದಿಯಾಗಿದೆ. ಪಾಕ್‌ನ ಸಿಂಧ್‌ ಪ್ರಾಂತ್ಯದಲ್ಲಿರೋ ಪವಿತ್ರವಾದ ದೇವಾಲಯ ಹಿಂಗ್ಲಾಜ್‌ ಮಾತಾ ಮಂದಿರವನ್ನ ಪಾಕ್‌ ಧ್ವಂಸಗೊಳಿಸಿರೋದು ವರದಿಯಾಗಿದೆ. ಕೋರ್ಟ್‌ ಆದೇಶ ನೀಡಿರೋ ಕಾರಣದಿಂದ ಈ ದೇವಾಲಯವನ್ನ ಧ್ವಂಸ ಮಾಡಲಾಗಿದೆ ಅಂತ ತರ್ಪಾರ್ಕರ್‌ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಡೆಮಾಲಿಶ್‌ಗೆ ಕೊಟ್ಟಿರೋ ಕಾರಣ ಏನು ಅಂದ್ರೆ ಹೊಸದಾಗಿ ಶುರುವಾಗಿರೋ ಕಾಫಿ ಶಾಪ್‌ಗೆ ಹೋಗೋಕೆ ದಾರಿ ಬೇಕು ಅಂತ ಕ್ಲಿಯರ್‌ ಮಾಡಲಾಗಿದೆ ಅಂತ ವರದಿಯಾಗಿದೆ. ಇದ್ರ ಜೊತೆಗೆ ಪಾಕ್‌ LOC (Line of Control) ಹತ್ತಿರದಲ್ಲಿರೋ ಶಾರದಾಪೀಠ ಮಂದಿರವನ್ನ ಕೂಡ ಡೆಮಾಲಿಶ್‌ ಮಾಡಲಾಗಿದೆ. ಈ ಶಾರದಾಪೀಠ ಮಂದಿರ UNESCO ಇಂದ ಗುರುತಿಸಲ್ಪಟ್ಟ ಪ್ರಮುಖ ತಾಣ. ಅಂದ್ಹಾಗೆ ಪಾಕಿಸ್ತಾನದಲ್ಲಿ ಈ ರೀತಿ ಹಿಂದೂ ದೇವಾಲಯಗಳನ್ನ ಡೆಮಾಲಿಶ್‌ ಮಾಡ್ತಿರೋದು ಮೊದಲೇನಲ್ಲ. ಈ ಹಿಂದೆಯೂ ಮಾರಿ ಮಾತಾ ಅನ್ನೋ ದೇವಾಲಯವನ್ನ ಪಾಕ್‌ ಆಡಳಿತ ಧ್ವಂಸ ಮಾಡಿತ್ತು. ಇನ್ನು ಇಲ್ಲಿ ಆಶ್ಚರ್ಯ ಪಡುವಂತಹ ವಿಷಯ ಏನಂತ ಹೇಳಿದ್ರೆ, ಸುಪ್ರೀಂ ಕೋರ್ಟ್‌ ಈ ಎರಡು ದೇವಾಲಯಗಳನ್ನ ರಕ್ಷಣೆ ಮಾಡ್ಬೇಕು ಅಂತ ಆದೇಶ ನೀಡಿತ್ತು. ಆದ್ರೂ ಕೂಡ ಪಾಕ್‌ ಈ ರೀತಿ ಹಿಂದೂ ದೇವಾಲಯಗಳನ್ನ ಧ್ವಂಸ ಮಾಡೋ ಕೆಲಸಕ್ಕೆ ಕೈ ಹಾಕಿದೆ.

-masthmagaa.com

Contact Us for Advertisement

Leave a Reply