2021ರಲ್ಲಿ ಮೊಬೈಲ್ ಆ್ಯಪ್ ಮೂಲಕ ಜನಗಣತಿ..!

2021ರಲ್ಲಿ ಜನಗಣತಿಗೆ ಮೊಬೈಲ್ ಆ್ಯಪ್ ಬಳಸಲಾಗುತ್ತೆ ಅಂತ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ದೆಹಲಿಯಲ್ಲಿ ಜನಗಣತಿ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಪೇಪರ್ ಮೂಲಕ ಜನಗಣತಿ ಮಾಡಲಾಗುತಿತ್ತು. ಆದರೆ 2021ರಲ್ಲಿ ಜನಗಣತಿಗಾಗಿ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಲಾಗುತ್ತೆ. ಈ ಮೂಲಕ 140 ವರ್ಷಗಳಿಂದ ನಡೆದು ಬಂದಿದ್ದ ಪೇಪರ್ ಮೂಲಕ ಜನಗಣತಿ ಪದ್ಧತಿಗೆ ತಿಲಾಂಜಲಿ ಹಾಡಲಾಗುತ್ತೆ ಅಂತ ಹೇಳಿದ್ದಾರೆ. ಅಲ್ಲದೇ ಈ ಡಿಜಿಟಲ್ ಜನಗಣತಿಗೆ 12 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲು ಪ್ಲಾನ್ ಮಾಡಲಾಗಿದೆ. 2021ರ ಆಗಸ್ಟ್ 12ರಿಂದ ಆರಂಭವಾಗೋ ಜನಗಣತಿ ತಿಂಗಳಾಂತ್ಯದವರೆಗೂ ನಡೆಯಲಿದೆ.

Contact Us for Advertisement

Leave a Reply