ಸಲಿಂಗಕಾಮ ಒಂದು ಕಾಯಿಲೆ: ವಿವಾದಾತ್ಮಕ ವರದಿ ನೀಡಿದ RSS

masthmagaa.com:

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರೊ ಹೊತ್ತಲ್ಲೇ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ನ ಮಹಿಳಾ ವಿಭಾಗ ಇನ್ನೊಂದು ಚರ್ಚಾಸ್ಪದ ವರದಿ ನೀಡಿದೆ. ಸಲಿಂಗಕಾಮ ಒಂದು ಕಾಯಿಲೆ. ಸಲಿಂಗ ಪ್ರೇಮಿಗಳ ವಿವಾಹಗಳನ್ನ ಕಾನೂನುಬದ್ದಗೊಳಿಸಿದ್ರೆ ಈ ಕಾಯಿಲೆ ಮತ್ತಷ್ಟು ಹೆಚ್ಚುತ್ತದೆ ಅಂತ ತನ್ನ ವರದಿಯಲ್ಲಿ ಹೇಳಿದೆ. ದೇಶಾದ್ಯಂತ ಈ ಕುರಿತು ಸರ್ವೇ ಮಾಡಲಾಗಿದೆ. ಅಲೋಪಥಿಯಿಂದ ಹಿಡಿದು ಆಯುರ್ವೇದದವರೆಗೆ 318 ವೈದ್ಯಕೀಯ ವೃತ್ತಿಪರರನ್ನ ಈ ಸಮೀಕ್ಷೆಯಲ್ಲಿ ಮಾತನಾಡಿಸಲಾಗಿದೆ. ಈ ಸಮೀಕ್ಷೆ ಆಧಾರದ ಮೇಲೆ ಲೈಂಗಿಕ ರೋಗಗಳ ಹರಡುವಿಕೆಗೆ ಸಲಿಂಗ ಸಂಬಂಧಗಳ ಕಾರಣವಾಗಬಹುದು ಅಂತ ಹೇಳಿದೆ. ಜೊತೆಗೆ ಸಲಿಂಗ ವಿವಾಹವನ್ನ ಲೀಗಲ್‌ ಮಾಡುವ ಬೇಡಿಕೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಸಮೀಕ್ಷೆ ಮಾಡಬೇಕು ಅಂತ RSS ಶಿಫಾರಸು ಮಾಡಿದೆ.

-masthmagaa.com

Contact Us for Advertisement

Leave a Reply