ಚೀನಾದ ಟಾರ್ಚರ್​ಗೆ ಸುಸ್ತಾದ್ರಾ ಹಾಂಗ್​ ಕಾಂಗ್​​​ ನಾಯಕಿ?

masthmagaa.com:

ಚೀನಾದ ಸ್ಪೆಷಲ್ ಅಡ್ಮಿನಿಸ್ಟ್ರೇಷನ್ ರೀಜನ್​ ಆಗಿರೋ ಹಾಂಗ್ ಕಾಂಗ್​ನಲ್ಲಿ ಮೇ ತಿಂಗಳಲ್ಲಿ ನಡೆಯಲಿರೋ ಎಲೆಕ್ಷನ್​ಗೆ ತಾವು ಮತ್ತೊಮ್ಮೆ ಸ್ಪರ್ಧಿಸಲ್ಲ ಅಂತ ಅಲ್ಲಿನ ಹಾಲಿ ಚೀಫ್​ ಎಕ್ಸಿಕ್ಯುಟಿವ್ ಕ್ಯಾರಿ ಲ್ಯಾಮ್​ ಅನೌನ್ಸ್ ಮಾಡಿದ್ದಾರೆ. ನಂಗೆ ನನ್ನ ಫ್ಯಾಮಿಲಿಯೇ ಮೊದಲ ಪ್ರೈಯಾರಿಟಿ ಅಂದಿರೋ ಕ್ಯಾರಿ ಲ್ಯಾಮ್, ಎರಡನೇ ಅವಧಿಗೆ ಹಾಂಗ್​ ಕಾಂಗ್​ನ ಲೀಡರ್ ಆಗಲ್ಲ ಅಂತ ಸ್ಪಷ್ಟಪಡಿಸಿದ್ಧಾರೆ. ಹಾಂಗ್​ ಕಾಂಗ್​ನ ಸೆಕೆಂಡ್​ ಮೋಸ್ಟ್​ ಸೀನಿಯರ್ ಅಧಿಕಾರಿ ಎನಿಸಿಕೊಂಡಿರೋ ಚೀಫ್​ ಸೆಕ್ರೆಟರಿ ಜಾನ್​ ಲೀ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಚೀಫ್​ ಎಕ್ಸಿಕ್ಯುಟಿವ್​ ಎಲೆಕ್ಷನ್ಸ್​ಗೆ ಸ್ಫರ್ಧಿಸಬಹುದು. ಅವರೇ ಹಾಂಗ್​ಕಾಂಗ್​ನ ಮುಂದಿನ ಲೀಡರ್ ಆಗಬಹುದು ಎನ್ನಲಾಗ್ತಿದೆ. ಗ್ಲೋಬಲ್ ಫೈನಾನ್ಷಿಯಲ್​ ಹಬ್​ ಅಂತಾನೇ ಕರೆಸಿಕೊಳ್ಳೋ ಚೀನಾ ನಿಯಂತ್ರಣದ ಹಾಂಗ್​ ಕಾಂಗ್​ ಈ ಹಿಂದೆ ಬ್ರಿಟೀಷ್​ ವಸಾಹತು ಆಗಿತ್ತು. 1997ರಲ್ಲಿ ಬ್ರಿಟೀಷರು ಇದನ್ನ ಚೀನಾಗೆ ಬಿಟ್ಟುಕೊಟ್ರು. ಅಲ್ಲಿಂದ ಇಲ್ಲಿವರೆಗೆ ಒಟ್ಟು ನಾಲ್ಕು ಚೀಫ್​ ಎಕ್ಸಿಕ್ಯುಟಿವ್​ಗಳನ್ನ ನೋಡಿದೆ ಹಾಂಗ್ ಕಾಂಗ್​. ನಾಲ್ವರು ಕೂಡ ಹಾಂಗ್​ ಕಾಂಗ್​​ನ ಕೆಲ ನಾಗರಿಕರಲ್ಲಿರೋ ಪ್ರಜಾಪ್ರಭುತ್ವ ಪರ ಒಲವು ಮತ್ತು ಚೀನಾದ ಕಮ್ಯುನಿಸ್ಟ್​ ಪಕ್ಷದ ನಾಯಕರ ವಿಷನ್​ ನಡುವೆ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಕ್ಯಾರಿ ಲ್ಯಾಮ್​ 2017ರಲ್ಲಿ ಎಲೆಕ್ಷನ್​ ಗೆದ್ದು ಚೀಫ್​ ಎಕ್ಸಿಕ್ಯುಟಿವ್ ಆದ್ರು. ಇವರ ಅಧಿಕಾರಾವಧಿಯಲ್ಲಿ ಚೀನಾ ನಿಯಂತ್ರಣ ವಿರುದ್ಧ, ಪ್ರಜಾಪ್ರಭುತ್ವ ಪರ ಭಾರಿ ಪ್ರತಿಭಟನೆಗಳು ನಡೆದಿದ್ವು. ಇದನ್ನ ಗಮನಿಸಿ 2020ರಲ್ಲಿ ಚೀನಾ ಸರ್ಕಾರ ಇಲ್ಲಿ ನ್ಯಾಷನಲ್ ಸೆಕ್ಯೂರಿಟಿ ಲಾ ಅನ್ನ ಹೇರಿಬಿಡ್ತು. ಅಲ್ಲಿಗೆ ಹಾಂಗ್ ಕಾಂಗ್​ ಜನರ ಜೀವನದ ಮೇಲೆ ಚೀನಾ ನಿಯಂತ್ರಣ ಮತ್ತಷ್ಟು ಹೆಚ್ಚಾಯ್ತು. ಸರ್ಕಾರದ ವಿರುದ್ಧ ಯಾರೇ ಪ್ರತಿಭಟನೆ ಮಾಡಿದ್ರು ಅವರನ್ನ ನ್ಯಾಷನಲ್​ ಸೆಕ್ಯುರಿಟಿ ಲಾ ಅಡಿಯಲ್ಲಿ ಅರೆಸ್ಟ್ ಮಾಡುತ್ತೆ ಚೀನಾ.

-masthmagaa.com

Contact Us for Advertisement

Leave a Reply