ವಿದೇಶದಿಂದ ಬಂದು ಮನೆಗೆಲಸ ಮಾಡ್ತಿರೋರು ಕೊರೋನಾ ಲಸಿಕೆ ಹಾಕಿಸಿಕೊಳ್ಳಲೇಬೇಕು!

masthmagaa.com:

ವಿದೇಶದಿಂದ ಬಂದು ಮನೆಗೆಲಸ ಮಾಡ್ತಿರೋರು ಕಡ್ಡಾಯವಾಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಬೇಕು, ಇಲ್ಲದಿದ್ರೆ ಅವರು ಕೆಲಸ ಕಳೆದುಕೊಳ್ಳಬೇಕಾಗುತ್ತೆ ಅಂತ ಹಾಂಗ್ ಕಾಂಗ್ ಎಚ್ಚರಿಸಿದೆ. ಮನೆಗೆಲಸ ಮಾಡೋರಲ್ಲಿ, ಹೆಚ್ಚು ವೇಗವಾಗಿ ಹರಡುವ ಕೊರೋನಾ ವೈರಾಣು ಪತ್ತೆಯಾದ ಬೆನ್ನಲ್ಲೇ ಈ ಕ್ರಮಕ್ಕೆ ಮುಂದಾಗಿದೆ. ಹಾಂಗ್​ ಕಾಂಗ್​ನಲ್ಲಿ ಸುಮಾರು 3.70 ಲಕ್ಷ ವಿದೇಶಿ ಮನೆಗೆಲಸದವರಿದ್ದಾರೆ. ಅದರಲ್ಲಿ ಹೆಚ್ಚಿನವರು ಫಿಲಿಪ್ಪೀನ್ಸ್ ಮತ್ತು ಇಂಡೋನೇಷ್ಯಾದವರು. ಹೀಗಾಗಿ ಕೊರೋನಾ ವಿಚಾರದಲ್ಲಿ ತನ್ನ ದೇಶದ ಪ್ರಜೆಗಳನ್ನ ತಾರತಮ್ಯದಿಂದ ನೋಡಲಾಗ್ತಿದೆ ಅಂತ ಫಿಲಿಪ್ಪೀನ್ಸ್ ಸರ್ಕಾರ ಅಸಮಾಧಾನ ಹೊರಹಾಕಿದೆ. ಮನೆಗೆಲಸದವರಿಗೆ ಫ್ರೀಯಾಗಿ ಲಸಿಕೆ ನೀಡ್ತಿರೋದು ಒಳ್ಳೇ ವಿಚಾರವೇ. ಆದ್ರೆ ಕಡ್ಡಾಯವಾಗಿ ಹಾಕಿಸಿಕೊಳ್ಳಲೇಬೇಕು, ಇಲ್ಲದಿದ್ರೆ ಕೆಲಸ ಕಳೆದುಕೊಳ್ಳೋದಾಗಿ ಹೇಳೋದು ಸರಿಯಲ್ಲ. ಇದು ತಾರತಮ್ಯದಿಂದ ಕೂಡಿದೆ ಅಂತ ಫಿಲಿಪ್ಪೀನ್ಸ್ ಹೇಳಿದೆ. ಹೊಸ ನಿಯಮದ ಪ್ರಕಾರ ಮನೆಗೆಲಸದವರು ತಮ್ಮ ಕಾಂಟ್ರಾಕ್ಟ್​ ರಿನೀವಲ್ ಆಗೋಕೂ ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಹಾಂಗ್​ ಕಾಂಗ್​ಗೆ ಮನೆಗೆಲಸಕ್ಕೆ ಅಂತ ಬರೋರು ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತೆ.

-masthmagaa.com

Contact Us for Advertisement

Leave a Reply