ಆಫ್ಘನ್ನರಿಗೆ ಸಹಾಯ ಮಾಡಲು ಭಾರತ ಸಿದ್ದ

masthmagaa.com:

ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದಲ್ಲಿ ಭಾರತ ಅಫ್ಘಾನಿಸ್ತಾನದ ವಿಚಾರವನ್ನು ಪ್ರಸ್ತಾಪಿಸಿದೆ. ಅಫ್ಘಾನಿಸ್ತಾನದ ನೆಲವನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕರಿಂದ ಬಳಕೆಯಾಗಲು, ಆ ಮೂಲಕ ನೆರೆಯ ದೇಶಗಳ ಮೇಲೆ ದಾಳಿ ನಡೆಸಲು ಬಿಡಬಾರದು ಅಂತ ಒತ್ತಾಯಿಸಿದೆ. ಅಫ್ಘಾನಿಸ್ತಾನದ ಮಾನವ ಹಕ್ಕುಗಳ ಬಗ್ಗೆ ಚಿಂತೆ ವ್ಯಕ್ತಪಡಿಸಿದ ಭಾರತ, ದೇಶದಲ್ಲಿ ಸ್ಥಿರತೆ ನೆಲೆಯಾಗಬೇಕಾದ್ರೆ ಶಾಂತಿ ಮತ್ತು ಭದ್ರತೆ ತುಂಬಾ ಮುಖ್ಯ.. ನೆರೆಯ ದೇಶವಾದ ಭಾರತ ಅಫ್ಘಾನಿಸ್ತಾನದ ಜೊತೆಗೆ ಸಹಸ್ರಾರು ವರ್ಷಗಳಿಂದ ಸ್ನೇಹ ಸಂಬಂಧ ಹೊಂದಿದೆ. ಆಫ್ಗನ್ ಸ್ನೇಹಿತರ ಅಗತ್ಯತೆಗಳನ್ನು ಪೂರೈಸಲು, ಸಹಾಯ ಮಾಡಲು ಭಾರತ ಸಿದ್ಧ ಅಂತ ಹೇಳಿದೆ. ಅದೇ ರೀತಿ ಅಫ್ಘಾನಿಸ್ತಾನದಿಂದ ನೆರೆ ಹೊರೆಯ ದೇಶಗಳಿಗೆ ಯಾವುದೇ ರೀತಿಯ ತೊಂದ್ರೆಯಾಗೋದಿಲ್ಲ. ಅದ್ರ ನೆಲವನ್ನು ಲಷ್ಕರ್ ಎ ತೊಯ್ಬಾ ಮತ್ತು ಜೈಶ್ ಎ ಮೊಹ್ಮದ್​ನಂತ ಉಗ್ರ ಸಂಘಟನೆಗಳು ಬಳಸಿಕೊಳ್ಳಲು ಅವಕಾಶ ನೀಡೋದಿಲ್ಲ ​ಅಂತ ಭಾವಿಸಿದ್ದೀವಿ ಅಂತ ಹೇಳಿದೆ. ಆದ್ರೆ ಎಲ್ಲೂ ತಾಲಿಬಾನಿಗಳನ್ನು ಗುರಿಯಾಗಿಸಿ ಭಾರತ ಟೀಕಿಸಲು ಮುಂದಾಗಲಿಲ್ಲ.

-masthmagaa.com

Contact Us for Advertisement

Leave a Reply