UNSCಯಲ್ಲಿ ಪಾಕ್‌ಗೆ ಮಾತಾಡುವ ಅಧಿಕಾರವಿಲ್ಲ: ಜೈಶಂಕರ್‌

masthmagaa.com:

ಪದೇ ಪದೇ ಗಡಿಯಲ್ಲಿ ತಂಟೆ ತೆಗೆಯೋ ಚೀನಾ ಒಂದ್‌ ಕಡೆ ಆದ್ರೆ, ಜಮ್ಮು-ಕಾಶ್ಮೀರದ ವಿಚಾರ ಕೆದಕೋ ಪಾಕಿಸ್ತಾನ್ ಇನ್ನೊಂದ್‌ ಕಡೆ.‌ ಪಾಕ್‌ಗೆ ಜಮ್ಮು-ಕಾಶ್ಮೀರ ವಿಷಯವಾಗಿ ಭಾರತದಿಂದ ಸಾಕಷ್ಟು ಬಾರಿ ಮಂಗಳಾರತಿ ಮಾಡಿಸಿಕೊಂಡಿದ್ದು ಸಾಕಾಗಿಲ್ಲ ಅನ್ಸುತ್ತೆ. ಇದೀಗ ಮತ್ತೆ ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ನೆನ್ನೆ ನಡೆದ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಕ್‌ನ ವಿದೇಶಾಂಗ ಸಚಿವ ಬಿಲ್‌ವಾಲ್‌ ಭುಟ್ಟೊ ಜರ್ದಾರಿ ಜಮ್ಮು-ಕಾಶ್ಮೀರ ಬಗೆಹರಿಯದ ವಿಷಯವಾಗಿದೆ ಅಂತ ಹೇಳಿದ್ರು. ಇದಕ್ಕೆ ಎದಿರೇಟು ನೀಡಿರೋ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅಲ್‌ಖೈದಾ ಲೀಡರ್‌ ಒಸಮಾ ಬಿನ್‌ ಲಾಡೆನ್‌ನ್ನ ಸಾಕಿ ಹಾಗೂ ನೆರೆಯ ದೇಶದ ಸಂಸತ್‌ ಮೇಲೆ ದಾಳಿ ಮಾಡಿದ ದೇಶಕ್ಕೆ ವಿಶ್ವಸಂಸ್ಥೆಯಲ್ಲಿ ಉಪದೇಶ ಮಾಡೋ ಅಧಿಕಾರವಿಲ್ಲ ಅಂತ ಕಡ್ಡಿ ಮುರಿದ ಹಾಗೇ ಉತ್ತರ ನೀಡಿದ್ದಾರೆ. ಜೊತೆಗೆ UNನಲ್ಲಿ ಕೆಲ ಸುಧಾರಣೆಗಳನ್ನ ಮಾಡುವ ನಿಟ್ಟಿನಲ್ಲಿ ಸಭೆಯನ್ನ ಫೋಕಸ್‌ ಮಾಡಲಾಗಿದೆ. ಇದು ಇನ್ನು ವಿಳಂಬವಾಗಬಾರ್ದು. ಇದಕ್ಕೆ ಎಲ್ಲರ ದೃಷ್ಟಿಕೋನಗಳು ಬೇರೆಯಾಗಿವೆ. ಹಾಗೂ ರಿಫಾರ್ಮ್‌ನ್ನ ವಿರೋಧಿಸಿ ಸಮರ್ಥಿಸಿಕೊಳ್ಳುವ ಪ್ರಶ್ನೆಗಳು ಕೂಡ ಬರಬಾರ್ದು. ಅದ್ರಲ್ಲೂ ಗಡಿಯಾಚೆಗಿನ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡುವ ದೇಶಗಳಿಗೆ ಅಪ್ಲೈ ಆಗುತ್ತೆ ಅಂತ ಪಾಕ್‌ಗೆ ಇನಡೈರೆಕ್ಟ್‌ ಆಗಿ ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಜೈಶಂಕರ್‌, ಉಗ್ರ ಚಟುವಟಿಕೆಗೆ ಹಣಕಾಸು ನೆರವು ನೀಡೊ ದೇಶಗಳಿಗೆ ವಿಶ್ವಸಂಸ್ಥೆಯಲ್ಲಿ ನೀತಿಬೋಧನೆ ಮಾಡೊ ಅಧಿಕಾರವಿಲ್ಲ ಅಂತ ಪಾಕ್‌ಗೆ ತಿರುಗೇಟು ನೀಡಿದ್ದಾರೆ. ಇನ್ನು ಡಿಸೆಂಬರ್‌ ತಿಂಗಳ UNSC ಅಧ್ಯಕ್ಷತೆ ವಹಿಸಿಕೊಂಡಿರೊ ಭಾರತ, ಭಯೋತ್ಪಾದಕತೆ ನಿಗ್ರಹ ಹಾಗೂ ಒಕ್ಕೂಟದ ಸುಧಾರಣೆ ಅನ್ನೊ ಎರಡು ಪ್ರಮುಖ ಸಭೆಗಳನ್ನ ಆಯೋಜಿಸಿದೆ. ಸಭೆಯು ಜೈಶಂಕರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.

-masthmagaa.com

Contact Us for Advertisement

Leave a Reply