ತಾತ್ಕಾಲಿಕ ಸವಲತ್ತು (370ನೇ ವಿಧಿ), ಖಾಯಂ ಆಗಿ ಜಾರಿಯಾಗಲು ಹೇಗೆ ಸಾಧ್ಯ: ಸುಪ್ರೀಂ

masthmagaa.com:

ಜಮ್ಮು -ಕಾಶ್ಮೀರದಲ್ಲಿ ಯಾವುದೇ ವಿಧಾನಸಭೆ ಘಟಕ ಅಸ್ತಿತ್ವದಲ್ಲಿ ಇಲ್ಲದೆ ಇರುವಾಗ 370ನೇ ವಿಧಿಯನ್ನ ಮರಳಿ ಸ್ಥಾಪಿಸಲು ಯಾರು ಶಿಫಾರಸು ಮಾಡ್ತಾರೆ ಅಂತ ಸುಪ್ರೀಂಕೋರ್ಟ್ ಬುಧವಾರ ಪ್ರಶ್ನಿಸಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ರದ್ದುಗೊಳಿಸಿರೋದನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಿದವ್ರಿಗೆ ಸುಪ್ರೀಂಕೋರ್ಟ್‌ ಈ ಪ್ರಶ್ನೆ ಕೇಳಿದೆ. ಅಲ್ದೇ ಸಂವಿಧಾನದಲ್ಲಿ ತಾತ್ಕಾಲಿಕ ಸವಲತ್ತು (temporary provision) ಅಂತ ಉಲ್ಲೇಖವಾಗಿರೊ 370ನೇ ವಿಧಿ, 1957ರಲ್ಲಿ ಜಮ್ಮು -ಕಾಶ್ಮೀರ ವಿಧಾನಸಭೆ ಘಟಕದ ಅವಧಿ ಅಂತ್ಯಗೊಂಡ ಬಳಿಕ ಖಾಯಂ ಆಗಿ ಜಾರಿಯಾಗಲು ಹೇಗೆ ಸಾಧ್ಯ ಅಂತ ಪ್ರಶ್ನಿಸಿದೆ. ಅಂದ್ಹಾಗೆ 370ನೇ ವಿಧಿಯನ್ನು ರದ್ದುಗೊಳಿಸಿ 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನ ಪ್ರಶ್ನಿಸಿ ಸಲ್ಲಿಕೆಯಾದ ಹಲವಾರು ಅರ್ಜಿಗಳನ್ನ ವಿಚಾರಣೆ ನಡಸುತ್ತಿದೆ.

-masthmagaa.com

Contact Us for Advertisement

Leave a Reply