ಅಪಾಯದಲ್ಲಿ ವಿಶ್ವ: ಡೂಮ್ಸ್​​ಡೇ ಕ್ಲಾಕ್ ಭವಿಷ್ಯ!

masthmagaa.com:

ಡೂಮ್ಸ್​ಡೇ ಕ್ಲಾಕ್​ ಮಧ್ಯರಾತ್ರಿಯಿಂದ 100 ಸೆಕೆಂಡ್​​​​​ಗಳಷ್ಟು ದೂರ ಇದೆ ಅಂತ ಬಿಎಎಸ್​​​​ ಅಂದ್ರೆ ಬುಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್​​ನಲ್ಲಿ ಹೇಳಲಾಗಿದೆ. ಇದ್ರಿಂದ ಪರಮಾಣು ಶಸ್ತ್ರಾಸ್ತ್ರ, ಹವಾಮಾನ ಬದಲಾವಣೆ, ಕೊರೋನಾದ ಮುಂದುವರಿದ ಅಪಾಯವನ್ನು ಇದು ತೋರಿಸಿದೆ. ಈ ಡೂಮ್ಸ್ ಡೇ ಕ್ಲಾಕ್ ಅನ್ನೋದು ಭೂಮಿಗಿರೋ ಅಪಾಯವನ್ನು ತಿಳಿಸೋ ಗಡಿಯಾರದ ರೀತಿ.. ಮಧ್ಯರಾತ್ರಿಗೆ ಹತ್ತಿರ ಆದಷ್ಟು ಅಪಾಯ ಜಾಸ್ತಿ, ವಿನಾಶಕ್ಕೆ ಹತ್ತಿರವಾಗ್ತಿದ್ದೀವಿ ಅಂತ ಅರ್ಥ. ಬಿಎಎಸ್​​ನ್ನು 1945ರಲ್ಲಿ ಆಲ್ಬರ್ಟ್ ಐನ್​ಸ್ಟೀನ್, ಜೆ ರಾಬರ್ಟ್​​ ಓಪನ್​ ಹೈಮರ್​​​, ಯುಜಿನ್ ರಾಬಿನೋವಿಚ್​​ ಮತ್ತು ಚಿಕಾಗೋ ಯುನಿವರ್ಸಿಟಿಯ ಮೊದಲು ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ಸ್ಥಾಪಿಸಿದ್ರು. ಇದಾದ ಎರಡು ವರ್ಷಗಳ ಬಳಿಕ ಈ ಸಂಘಟನೆ ಡೂಮ್ಸ್​ಡೇ ಕ್ಲಾಕ್​​ನ್ನು ಸಿದ್ಧಪಡಿಸಿದ್ರು. 1945ರಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಪರಮಾಣು ದಾಳಿಯಿಂದ ಆದ ಹಾನಿಯ ಬಗ್ಗೆ ಮನುಕುಲವನ್ನು ಎಚ್ಚರಿಸೋದು ತಜ್ಞರ ಉದ್ದೇಶವಾಗಿತ್ತು. ಈ ವರ್ಷ ಪರಮಾಣು ಶಸ್ತ್ರಾಸ್ತ್ರಗಳ ಪೈಪೋಟಿ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನಗಳ ಬದಲಾವಣೆಯನ್ನು ಆಧರಿಸಿ ಅಪಾಯದ ಪ್ರಮಾಣವನ್ನು ನಿರ್ಧರಿಸಲಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ರೇಸ್ ಜಾಸ್ತಿಯಾಗಿದೆ. ಪರಮಾಣು ಯುಗ ನಡೀತಾ ಇದೆ. ಇರಾನ್ ಮತ್ತು ಉತ್ತರ ಕೊರಿಯಾದಂತ ದೇಶಗಳು ಈ ವಿಚಾರದಲ್ಲಿ ತುಂಬಾ ಮುಂದಿವೆ. ಹೀಗಾಗಿ ಇದ್ರಿಂದ ಆಪತ್ತು ಫಿಕ್ಸ್ ಅಂತ ಹೇಳಲಾಗಿದೆ. ಅದೇ ರೀತಿ ಹವಾಮಾನ ಬದಲಾವಣೆ ತಡೆಯಲು ಕಡಿಮೆ ಪ್ರಮಾಣದಲ್ಲಿ ಪ್ರಯತ್ನಪಡಲಾಗ್ತಿದೆ. ಮನುಷ್ಯನಿಂದಾಗಿ ಭೂಮಿ ಮೇಲಿನ ತಾಪಮಾನ ಜಾಸ್ತಿಯಾಗ್ತಿದೆ. ಇದ್ರಿಂದ ಅರಣ್ಯದಲ್ಲಿ ಕಾಡ್ಗಿಚ್ಚು, ಹಿಮಾಲಯದಲ್ಲಿ ಹಿಮ ಕರಗೋದು ಸಂಭವಿಸ್ತಿದೆ ಅಂತ ಹೇಳಲಾಗಿದೆ. ಫೋನ್ ಟ್ಯಾಪ್, ಹ್ಯಾಕ್​, ಆನ್​ಲೈನ್​ ಫ್ರಾಡ್ ಹೀಗೆ ತಂತ್ರಜ್ಞಾನದ ದುರ್ಬಳಕೆ ಕೂಡ ಆಗ್ತಿದೆ ಅಂತಲೂ ಬುಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್​​ನಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply