ಕೊರೋನಾದಿಂದ 1 ತಿಂಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಮಂದಿ ಗೊತ್ತಾ..?

masthmagaa.com:

ಕೊರೋನಾ ಭಾರತದಲ್ಲಿ ಸಾವು ನೋವಿಗೆ ಮಾತ್ರ ಕಾರಣವಾಗಿಲ್ಲ.. ಬದಲಾಗಿ ಬದುಕಿರುವವರ ಉದ್ಯೋಗವನ್ನು ಕೂಡ ಕಿತ್ತುಕೊಳ್ತಿದೆ. ಕೊರೋನಾ ಜಾಸ್ತಿಯಾದ ಕಳೆದ ಏಪ್ರಿಲ್ ಒಂದೇ ತಿಂಗಳಲ್ಲಿ ನಿರುದ್ಯೋಗ ದರ ಶೇ.8ಕ್ಕೆ ಏರಿಕೆಯಾಗಿದೆ. ಕಳೆದ 4 ತಿಂಗಳಲ್ಲೇ ಇದು ಅಧಿಕವಾಗಿದೆ. ಪ್ರೈವೇಟ್ ರಿಸರ್ಚ್​ ಸಂಸ್ಥೆ ಸಿಎಂಐಇ ಅಂದ್ರೆ ಸೆಂಟರ್ ಫರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಲೆಕ್ಕಾಚಾರದ ಪ್ರಕಾರ ಏಪ್ರಿಲ್ ತಿಂಗಳೊಂದರಲ್ಲೇ 70 ಲಕ್ಷಕ್ಕೂ ಅಧಿಕ ಜನ ಕೆಲಸ ಕಳೆದುಕೊಂಡಿದ್ದು, ನಿರುದ್ಯೋಗ ದರ 7.97 ಪರ್ಸೆಂಟ್​​ಗೆ ಏರಿಕೆಯಾಗಿದೆ ಅಂತ ತಿಳಿದಿದೆ. ಮಾರ್ಚ್​ ತಿಂಗಳಲ್ಲಿ ಈ ದರ 6.5 ಪರ್ಸೆಂಟ್ ಇತ್ತು. ಕೊರೋನಾ ಲಾಕ್​​ಡೌನ್​ನಿಂದಾಗಿ ಈ ರೀತಿಯಾಗಿದ್ದು, ಸದ್ಯಕ್ಕಂತೂ ಪರಿಸ್ಥಿತಿ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ. ಯಾಕಂದ್ರೆ ಮೇ ಕೊರೋನಾ ಹಾವಳಿ ಇನ್ನೂ ಮುಂದುವರಿದಿರೋದ್ರಿಂದ ಮೇ ತಿಂಗಳಲ್ಲೂ ನಿರುದ್ಯೋಗ ಸ್ಥಿತಿ ಮತ್ತಷ್ಟು ಜಾಸ್ತಿಯಾಗಬಹುದು ಅಂತ ಕೂಡ ಸಂಸ್ಥೆ ಮಾಹಿತಿ ನೀಡಿದೆ. ಇದ್ರಿಂದಾಗಿ ಕಳೆದ ವರ್ಷದ ಲಾಕ್​​ಡೌನ್​ನಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಾ ಬಂದಿದ್ದ ದೇಶದ ಆರ್ಥಿಕತೆ ಮೇಲೂ ದುಷ್ಪರಿಣಾಮ ಉಂಟಾಗಿದೆ.

-masthmagaa.com

Contact Us for Advertisement

Leave a Reply