ಟೋಕಿಯೋ ಒಲಿಂಪಿಕ್ಸ್​: ಇವತ್ತಿನ ಅಪ್​ಡೇಟ್​.. ಪದಕ ಪಟ್ಟಿ ಹೇಗಿದೆ?

masthmagaa.com:

ಟೋಕಿಯೋ ಒಲಿಂಪಿಕ್ಸ್​ನ ಮಹಿಳೆಯರ ಹಾಕಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಸೋಲಿಸಿ ಟೀಂ ಇಂಡಿಯಾ ಸೆಮಿ ಫೈನಲ್​​ ಪ್ರವೇಶಿಸಿದೆ. ಈ ಮೂಲಕ ಒಲಿಂಪಿಕ್ಸ್​ನಲ್ಲಿ ಮೊದಲ ಸಲ ಸೆಮಿ ಫೈನಲ್​ ಪ್ರವೇಶಿಸಿ ಇತಿಹಾಸ ಬರೆದಿದೆ. ಕ್ವಾರ್ಟರ್​ ಫೈನಲ್​ನಲ್ಲಿ ಆಸ್ಟ್ರೇಲಿಯಾವನ್ನ ಭಾರತ 1-0 ಅಂತರದಿಂದ ಮಣಿಸಿತು. ಅಂದ್ಹಾಗೆ ಆಸ್ಟ್ರೇಲಿಯಾ ಮೂರು ಸಲ ಒಲಿಂಪಿಕ್​ ಚಾಂಪಿಯನ್​, ರ್ರ್ಯಾಂಕಿಂಗ್​ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಭಾರತ 9ನೇ ಸ್ಥಾನದಲ್ಲಿದೆ, ಅಲ್ಲದೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಒಂದೇ ಒಂದು ಪಂದ್ಯ ಸೋತಿರಲಿಲ್ಲ ಆಸ್ಟ್ರೇಲಿಯಾ. ಅಂಥಾ ಆಸ್ಟ್ರೇಲಿಯಾವನ್ನೇ ಮಣಿಸಿ ಭಾರತದ ಮಹಿಳೆಯರ ಹಾಕಿ ತಂಡ ಸೆಮೀಸ್​​ಗೆ ಲಗ್ಗೆ ಇಟ್ಟಿದೆ. ಭಾರತದ ಪರ ಏಕೈಕ ಗೋಲ್ ಅನ್ನ ಗುರ್ಜಿತ್ ಕೌರ್​ ಬಾರಿಸಿ ಆಸ್ಟ್ರೇಲಿಯಾಗೆ ಶಾಕ್​ ಕೊಟ್ರು. ಭಾರತದ ಗೆಲುವಿಗೆ ಆಸ್ಟ್ರೇಲಿಯಾದ ಹೈ ಕಮಿಷರ್​ ಬ್ಯಾರಿ ಓ ಫರೆಲ್​​ ಅಭಿನಂದನೆ ಸೂಚಿಸಿದ್ದಾರೆ. ನಿನ್ನೆಯಷ್ಟೇ ಭಾರತದ ಪುರುಷರ ಹಾಕಿ ತಂಡ ಕೂಡ 49 ವರ್ಷಗಳ ಬಳಿಕ ಸೆಮಿ ಫೈನಲ್​ಗೆ ಎಂಟ್ರಿಕೊಟ್ಟಿತ್ತು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಭಾರತ ಮತ್ತು ಬೆಲ್ಜಿಯಂ ನಡುವೆ ಪುರುಷರ ಹಾಕಿ ಸೆಮಿ ಫೈನಲ್ ನಡೆಯಲಿದೆ. ಇನ್ನು ಒಲಿಂಪಿಕ್ಸ್​ನ ಪದಕ ಪಟ್ಟಿಯಲ್ಲಿ ಟಾಪ್​-4ರಲ್ಲಿರೋ ದೇಶಗಳನ್ನ ನೋಡೋದಾದ್ರೆ, 29 ಗೋಲ್ಡ್ ಮೆಡಲ್ಸ್​ನೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದ್ರೆ, ಯುಎಸ್​ 22, ಜಪಾನ್ 17 ಮತ್ತು ಆಸ್ಟ್ರೇಲಿಯಾ 14 ಚಿನ್ನದ ಪದಕದೊಂದಿಗೆ ಮೊದಲ ನಾಲ್ಕು ಸ್ಥಾನದಲ್ಲಿದೆ. ಭಾರತ ಎರಡು ಪದಕದೊಂದಿಗೆ 62ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply