ಹುಬ್ಬಳ್ಳಿಯಲ್ಲಿ ಹಾಡುಹಗಲೇ ಕೈ ಕಾರ್ಪೋರೇಟರ್‌ ಮಗಳ ಬರ್ಬರ ಹತ್ಯೆ!

masthmagaa.com:

ಕಾರ್ಪೋರೇಟರ್‌ ಒಬ್ರ ಮಗಳನ್ನ ಹಾಡು ಹಗಲೇ ಬರ್ಬರ ಹತ್ಯೆ ಮಾಡಿರೊ ಘಟನೆ ಹುಬ್ಬಳ್ಳಿಯ ಪ್ರತಿಷ್ಠಿತ ಬಿ.ವಿ.ಬಿ ಕಾಲೇಜಿನಲ್ಲಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕಾರ್ಪೋರೇಟರ್‌ ನಿರಂಜನ ಅವ್ರ ಪುತ್ರಿ ನೇಹಾ ಹಿರೇಮಠರನ್ನ ಹತ್ಯೆ ಮಾಡಲಾಗಿದೆ. ನೇಹಾ ಬಿ.ವಿ.ಬಿ ಕಾಲೇಜಿನಲ್ಲಿ ಎಂ.ಸಿ.ಎ ಓದ್ತಿದ್ಳು. ಇನ್ನು ಅದೇ ಕಾಲೇಜಿನಲ್ಲಿ ಬಿ.ಸಿ.ಎ ಓದ್ತಿದ್ದ ಸವದತ್ತಿ ಮೂಲದ ಫಯಾಜ್‌ ಎಂಬಾತ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ನೇಹಾರನ್ನ ಕೊಲೆ ಮಾಡಿದ್ದಾನೆ ಅಂತ ವರದಿಯಾಗಿದೆ. ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಫಯಾಜ್‌ನನ್ನ ಹುಬ್ಬಳ್ಳಿ ಪೋಲಿಸರು ಅರೆಸ್ಟ್‌ ಮಾಡಿದ್ದಾರೆ. ಇನ್ನು ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ನೇಹಾಳನ್ನ ಫಯಾಜ್ ಕೊಲೆ ಮಾಡಿದ್ದಾನೆ ಅಂತ ಶಂಕೆ ವ್ಯಕ್ತವಾಗಿದೆ.

-masthmagaa.com

Contact Us for Advertisement

Leave a Reply