ಹುಬ್ಬಳ್ಳಿ ಗಲಭೆ: ಮತ್ತೆ ನಾಲ್ವರ ವಿರುದ್ಧ ಎಫ್‌ಐಆರ್‌

masthmagaa.com:

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಇವತ್ತು ಟ್ವಿಸ್ಟ್‌ ಸಿಕ್ಕಿದ್ದು, ಗಲಭೆ ಸಂಬಂಧಿಸಿದಂತೆ ಹಲವು ವಿಡೀಯೋಗಳು ಲೀಕ್‌ ಆಗಿವೆ. ಇದ್ರಲ್ಲಿ ಕಾಂಗ್ರೆಸ್‌ ನಾಯಕ ಅಲ್ತಾಫ್‌ ಹಳ್ಳೂರು ವಾಹನದ ಮೇಲೆ ಹತ್ತಿ ಪ್ರಚೋದನಾತ್ಮಕ ಭಾಷಣ ನೀಡಿದ್ದ ಮೌಲ್ವಿ ಜೊತೆ ಇರೋದು ಕಂಡುಬಂದಿದೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರೋ ಅಲ್ತಾಫ್‌ ನಾನು ಪ್ರಚೋದನೆ ಮಾಡ್ತಿರ್ಲಿಲ್ಲ. ನಮ್ಮ ಸಮುದಾಯದವ್ರನ್ನ ಸುಮ್ಮನಾಗಿಸ್ತಿದ್ದೆ, ಅದ್ಕೆ ಜೀಪ್‌ ಹತ್ತಿದ್ದೆ. ಇದಕ್ಕೆ ಪೋಲಿಸ್‌ ಕೂಡ ಸಾಕ್ಷಿ ಅವ್ರನ್ನ ಕೇಳಿಯೇ ಹತ್ತಿದ್ದು ಅಂತ ಹೇಳಿದ್ದಾನೆ. ಆದ್ರೆ ಈಗ ಪೋಲಿಸರು ಅಲ್ತಾಪ್‌ ಹಳ್ಳೂರ, ಮೌಲ್ವಿ ವಸೀಂ ಪಠಾಣ್‌, ಕಾಂಗ್ರೇಸ್‌ ಕಾರ್ಪೋರೇಟರ್‌ ಆರೀಫ್‌ ಬದ್ರಾಪುರ ನಾಲ್ವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದ್ದಾರೆ. ಆದ್ರೆ ಗಲಭೆಯ ನಂತ್ರ ಮೊಹಮ್ಮದ್‌ ಆರಿಫ್‌ ಮತ್ತು ಇನ್ನೊಬ್ಬ ಆರೊಪಿ ಖಾಸಿಂ ತಲೆಮರೆಸಿಕೊಂಡಿದ್ದಾರೆ ಅಂತ ಹೇಳಲಾಗಿದೆ. ಇನ್ನೊಂದ್‌ ಕಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 14 ಜನರನ್ನ ಬಂಧಿಸಿದ್ದು ಇವ್ರನ್ನ ಹುಬ್ಬಳ್ಳಿಯ ನಾಲ್ಕನೇ ಜೆಎಂಎಫ್‌ಸಿ ನ್ಯಾಯಲಾಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನು ಈಗಾಗ್ಲೆ ಅರೆಸ್ಟ್‌ ಆಗಿರೋ 102 ಆರೋಪಿಗಳನ್ನ ಇವತ್ತು ಹುಬ್ಬಳ್ಳಿಯಿಂದ ಕಲಬುರ್ಗಿ ಜೈಲಿಗೆ ವರ್ಗಾಯಿಸಲಾಗಿದೆ.

-masthmagaa.com

Contact Us for Advertisement

Leave a Reply