ಸೆಕ್ಸ್​ ಸ್ಕ್ಯಾಂಡಲ್​​​ನಲ್ಲಿ ಸಿಲುಕಿದ ಒಲಂಪಿಕ್ ಗೋಲ್ಡ್​ ವಿನ್ನರ್ ಜಿಮ್ನಾಸ್ಟ್​​​​..!

ಹಂಗೇರಿಯಾದ ಮಾಜಿ ಜಿಮ್ನಾಸ್ಟ್​ ಪಟು, ಚಿನ್ನದ ಪದಕ ವಿಜೇತ ಜೋಲ್ಟ್​ ಬೊರ್ಕಾಯಿ ಸೆಕ್ಸ್ ಸ್ಕ್ಯಾಂಡಲ್​​ನಲ್ಲಿ ಸಿಲುಕಿದ್ದಾರೆ. ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಇಂಟರ್ನೆಟ್​​ನಲ್ಲಿ ಲೀಕ್ ಆಗಿದೆ. 54 ವರ್ಷದ ಜೋಲ್ಟ್​​​​ ಮೇಯರ್ ಕೂಡ ಹೌದು. ಸದ್ಯ ಈ ವಿಡಿಯೋ ನೀಲಿ ಚಿತ್ರಗಳ ವೆಬ್​ಸೈಟ್​​ನಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಅವರು ಡ್ರಗ್ಸ್​ ತೆಗೆದುಕೊಳ್ಳುತ್ತಾ, ಯುವತಿಯರೊಂದಿಗೆ ಸಂಬಂಧ ಬೆಳೆಸುತ್ತಿರೋದು ರೆಕಾರ್ಡ್​ ಆಗಿದೆ. ಮೊದಲಿಗೆ ಅದು ನನ್ನ ವಿಡಿಯೋ ಅಲ್ಲ ಎಂದು ವಾದಿಸಿದ ಜೋಲ್ಟ್​​​​, ಈಗ ತಪ್ಪೊಪ್ಪಿಕೊಂಡಿದ್ದಾರೆ. ಆದ್ರೆ ಮೇಯರ್ ಹುದ್ದೆಗೆ ರಾಜೀನಾಮೆ ನೀಡಲು ನಿರಕಾರಿಸಿದ್ದಾರೆ. ಅಲ್ಲದೆ ಚುನಾವಣೆ ವೇಳೆ ನನ್ನ ಹೆಸರು ಹಾಳು ಮಾಡಲು ಹೂಡಿರುವ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಇದೇ ಭಾನುವಾರ ಅಲ್ಲಿ ಮೇಯರ್ ಚುನಾವಣೆ ನಡೆಯಲಿದೆ. ಅಲ್ಲದೆ ಜೋಲ್ಟ್​ ತಾವು ಎಸಗಿರುವ ಕೃತ್ಯಕ್ಕಾಗಿ ಸಾರ್ವಜನಿಕರ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

Contact Us for Advertisement

Leave a Reply