massthmagaa.com:

ಹೈದ್ರಾಬಾದ್ ಮಹಾನಗರ ಪಾಲಿಕೆಗೆ (GHMC) ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಒಟ್ಟು 150 ವಾರ್ಡ್​​ಗಳಿಗೆ ಚುನಾವಣೆ ನಡೆದಿತ್ತು. ಬೆಳಗ್ಗೆ 11 ಗಂಟೆ ವೇಳೆಗೆ BJP 88 ವಾರ್ಡ್​ಗಳಲ್ಲಿ ಮುನ್ನಡೆ ಸಾಧಿಸಿತ್ತು. ಉಳಿದಂತೆ TRS-32 ಮತ್ತು AIMIM-17 ವಾರ್ಡ್​ಗಳಲ್ಲಿ ಮುನ್ನಡೆ ಸಾಧಿಸಿತ್ತು. ಇದನ್ನ ನೋಡಿದ್ರೆ ಸಾಕಷ್ಟು ಕುತೂಹಲ ಕೆರಳಿಸಿದ್ದ, ಜಿದ್ದಾಜಿದ್ದಿನ ಫೈಟ್​ ಏರ್ಪಟ್ಟಿದ್ದ ಹೈದ್ರಾಬಾದ್ ಪಾಲಿಕೆ ಚುನಾವಣೆಯಲ್ಲಿ BJP ಒಂದು ಹೆಜ್ಜೆ ಮುಂದೆ ಇದ್ದಂತೆ ಕಾಣ್ತಿದೆ.

ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ  ಘಟಾನುಘಟಿ ನಾಯಕರನ್ನೇ ಪ್ರಚಾರದ ಅಖಾಡಕ್ಕೆ ಇಳಿಸಿತ್ತು. ಎಷ್ಟರಪಟ್ಟಿಗೆ ಅಂದ್ರೆ ಒಂದು ಪಾಲಿಕೆ ಚುನಾವಣೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮುಂತಾದ ನಾಯಕರೇ ಬಂದು ಪ್ರಚಾರ ಮಾಡಿದ್ರು. ಇದರ ಜೊತೆಗೆ ಬಿಜೆಪಿ, ಟಿಆರ್​ಎಸ್​ ಮತ್ತು ಎಐಎಂಐಎಂ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಿವಾದಾತ್ಮಕ ಹೇಳಿಕೆಗಳ ಸುರಿಮಳೆನೇ ನಡೆದು ಹೋಗಿತ್ತು. ಹೀಗಾಗಿ ಈ ಫಲಿತಾಂಶದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ.

-masthmagaa.com

Contact Us for Advertisement

Leave a Reply