ಅಮೆರಿಕದಲ್ಲಿ ಭಾರತೀಯನ ಬರ್ಬರ ಹತ್ಯೆ

masthmagaa.com:

ಅಮೆರಿಕ: ಹೈದ್ರಾಬಾದ್ ಮೂಲದ ವ್ಯಕ್ತಿಯೊಬ್ಬನನ್ನು ಅಮೆರಿಕದ ಜಾರ್ಜಿಯಾದಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಮನೆ ಬಳಿ ಬಂದ ಅಪರಿಚಿತರು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಮೊಹಮ್ಮದ್ ಆರಿಫ್ ಮೊಹಿಯುದ್ದೀನ್ ಮೃತ ದುರ್ದೈವಿ.. ಈತ ಕಳೆದ 10 ವರ್ಷಗಳಿಂದ ಅಮೆರಿಕದಲ್ಲಿ ದಿನಸಿ ಅಂಗಡಿ ನಡೆಸಿಕೊಂಡಿದ್ದ. ಸದ್ಯ ಆತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಮೆರಿಕಗೆ ತೆರಳಲು ವ್ಯವಸ್ಥೆ ಮಾಡಿಕೊಡುವಂತೆ ಕುಟುಂಬಸ್ಥರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಘಟನೆಗೆ ಕಾರಣ ಏನು ಅನ್ನೋದು ಇನ್ನೂ ಕೂಡ ತಿಳಿದು ಬಂದಿಲ್ಲ.

-masthmagaa.com

Contact Us for Advertisement

Leave a Reply