ತಾಲಿಬಾನ್​​​ ಮಾತ್ರವಲ್ಲ.. ಯಾರನ್ನೂ ನಂಬೋದಿಲ್ಲ: ಜೋ ಬೈಡೆನ್

masthmagaa.com:

ನಾನು ತಾಲಿಬಾನಿಗಳನ್ನು ನಂಬೋದಿಲ್ಲ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ವೈಟ್​ಹೌಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ತಾಲಿಬಾನಿಗಳು ಮಾತ್ರವಲ್ಲ.. ನಿಮ್ಮನ್ನು ಸೇರಿದಂತೆ ಯಾರನ್ನೂ ನಂಬಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಒಂದು ಮೂಲಭೂತ ನಿರ್ಧಾರಕ್ಕೆ ಬರಬೇಕು. ಅವರು ಜನಪರ, ಏಕತೆಯ ಸರ್ಕಾರವನ್ನು ರಚಿಸೋಕೆ ಮುಂದಾದ್ರೆ ಅವರಿಗೆ ಹೆಚ್ಚುವರಿ ಸಹಾಯ ಬೇಕಾಗುತ್ತೆ. ಆರ್ಥಿಕ ನೆರವು, ವ್ಯಾಪಾರ ಎಲ್ಲದ್ರಲ್ಲೂ ಹೆಲ್ಪ್ ಕೂಡ ಅನಿವಾರ್ಯವಾಗುತ್ತೆ. ಈ ಹಿಂದೆ ತಾಲಿಬಾನಿಗಳು ನಮ್ಮ ಸೇನೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳೋದಿಲ್ಲ ಅಂತ ಭರವಸೆ ನೀಡಿದ್ದಾರೆ. ಮತ್ತು ಜಗತ್ತಿನ ಉಳಿದ ದೇಶಗಳು ಅಫ್ಘಾನಿಸ್ತಾನದಲ್ಲಿ ರಾಜತಾಂತ್ರಿಕ ಸಂಬಂಧವನ್ನು ಉಳಿಸಬೇಕು ಅಂತ ಕೂಡ ಹೇಳಿದ್ದಾರೆ. ಅವರು ಈವರೆಗೆ ಅಮೆರಿಕ ಸೇನೆ ಮತ್ತು ಸ್ಥಳಾಂತರ ಕಾರ್ಯಾಚರಣೆಗೆ ಯಾವುದೇ ತೊಂದ್ರೆ ಮಾಡಿಲ್ಲ. ಇನ್ನು ಮುಂದೆಯೂ ಕೊಟ್ಟ ಮಾತಿನಂತೆ ನಡೆದುಕೊಳ್ತಾರಾ ಅಂತ ಕಾದು ನೋಡ್ತೀವಿ ಅಂತ ಹೇಳಿದ್ರು. ಜೊತೆಗೆ ಅಫ್ಘಾನಿಸ್ತಾನದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರಕ್ಕೆ ನಾನು ಈಗಲೂ ಬದ್ಧವಾಗಿದ್ದೇನೆ. ಇತಿಹಾಸದಲ್ಲಿ ಇದೊಂದು ತಾರ್ಕಿಕ, ತರ್ಕಬದ್ಧ ಮತ್ತು ಸರಿಯಾದ ನಿರ್ಧಾರವಾಗಿ ದಾಖಲಾಗಲಿದೆ ಅಂತ ಕೂಡ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply