ಮಹಾರಾಷ್ಟ್ರ ಡಿಸಿಎಂ & ಕುಟುಂಬಸ್ಥರಿಗೆ ಸೇರಿದ 1 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಸೀಜ್!

masthmagaa.com:

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತು ಅವರ ಕುಟುಂಬಸ್ಥರಿಗೆ ಸೇರಿದ 1 ಸಾವಿರ ಕೋಟಿ ರೂಪಾಯಿಯಷ್ಟು ಆಸ್ತಿ ಪಾಸ್ತಿಯನ್ನು ಐಟಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಮುಂಬೈನ ನಾರಿಮನ್ ಪಾಯಿಂಟ್​​ನಲ್ಲಿರೋ ನಿರ್ಮಲ್ ಟವರ್, ಶುಗರ್ ಫ್ಯಾಕ್ಟರಿ ಮತ್ತು ರೆಸಾರ್ಟ್​​ ಸೇರಿದಂತೆ ಐದು ಪ್ರಾಪರ್ಟಿ ಇದ್ರಲ್ಲಿ ಸೇರಿವೆ. ಇವೆಲ್ಲವೂ ಅಜಿತ್ ಪವಾರ್ ಮತ್ತು ಅವರ ಕುಟುಂಬಸ್ಥರಿಗೆ ಸೇರಿದ ಬೇನಾಮಿ ಆಸ್ತಿಯಾಗಿತ್ತು ಅಂತ ಐಟಿ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಅಜಿತ್ ಪವಾರ್ ಸಹೋದರಿಯರಿಗೆ ಸೇರಿದ ಮನೆ ಮತ್ತು ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು.

masthmagaa.com

Contact Us for Advertisement

Leave a Reply