ನಾನು ಮಹಾರಾಷ್ಟ್ರ ಸಿಎಂ ಆಗಬೇಕು: ಅಜಿತ್‌ ಪವಾರ್

masthmagaa.com:

ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗ್ತಿದ್ದು, NCPಯ ಉಭಯ ಬಣಗಳು ಇಂದು ತಮಗೆ ಇರುವ ಶಾಸಕರ ಬೆಂಬಲ ಪ್ರದರ್ಶನಕ್ಕೆ ಮುಂದಾಗಿವೆ. (ತಮ್ಮ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದಿರುವ ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ನೂತನ ಡಿಸಿಎಂ ನಡೆಸಿದ ಮಹತ್ವದ ಸಭೆಯಲ್ಲಿ ಕನಿಷ್ಠ 29 ಎನ್‌ಸಿಪಿ ಶಾಸಕರು ಭಾಗಿಯಾಗಿದ್ದಾರೆ. ಆದರೆ ತಮಗೆ 42 ಶಾಸಕರು ಹಾಗೂ ಮೂವರು ಎಂಎಲ್‌ಸಿಗಳಿಂದ ಅಫಿಡವಿಟ್ ದೊರಕಿದೆ ಅಂತ ಅಜಿತ್ ಪವಾರ್ ಬಣ ಹೇಳಿಕೊಂಡಿದೆ. ಅಂದ್ಹಾಗೆ ತಮಗೆ ಪಕ್ಷದ ಬಹುಪಾಲು ಶಾಸಕರ ಬೆಂಬಲ ಇದೆ ಅನ್ನೊದನ್ನ ಸಾಬೀತುಪಡಿಸಲು ಮುಂಬೈಯ ಬಾಂದ್ರಾದಲ್ಲಿ ಅಜಿತ್ ಪವಾರ್ ಸಭೆ ನಡೆಸಿದ್ದಾರೆ. ಇದರಲ್ಲಿ ತಾವು ಸಂಖ್ಯೆಗಳ ಲೆಕ್ಕಾಚಾರದಲ್ಲಿ ಮುಂದಿರೋದಾಗಿ ಸ್ಪಷ್ಟ ಸೂಚನೆ ರವಾನಿಸಿದ್ದಾರೆ. ಇನ್ನು ಸಭೆಯಲ್ಲಿ ಮಾತಾಡಿದ ಅಜಿತ್‌ ಪವಾರ್‌, ಮುಂದೊಂದು ದಿನ ಮಹಾರಾಷ್ಟ್ರದ ಸಿಎಂ ಆಗೋಕೆ ಬಯಸಿರೋದಾಗಿ ಇಚ್ಛೆ ಹೊರಹಾಕಿದ್ದಾರೆ. ಇದೇ ವೇಳೆ ಶರದ್‌ ಪವಾರ್‌ ವಿರುದ್ಧ ಟೀಕಿಸಿದ್ದು, ಬಿಜೆಪಿಯಲ್ಲಿ ನಾಯಕರು 75 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಾರೆ. ಆದರೆ, ಶರದ್‌ ಪವಾರ್‌ ಅವರಿಗೆ 83 ವರ್ಷ ವಯಸ್ಸಾಗಿದೆ ಎಂದಿದ್ದಾರೆ. ಅತ್ತ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಮುಂಬೈಯ ನಾರಿಮನ್ ಪಾಯಿಂಟ್‌ನಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕೇವಲ 13 ಶಾಸಕರು ಭಾಗವಹಿಸಿದ್ದಾರೆ. ಇದರೊಂದಿಗೆ ಅಜಿತ್ ಪವಾರ್ ತಮ್ಮ ಚಿಕ್ಕಪ್ಪನಿಗಿಂತಲೂ ಅಂದ್ರೆ ಶರದ್ ಪವಾರ್‌ಗಿಂತಲೂ ಅಧಿಕ ಸಂಖ್ಯೆಯಲ್ಲಿ ಶಾಸಕರ ಬೆಂಬಲ ಹೊಂದಿರುವುದು ಸಾಬೀತಾಗಿದೆ. ಆದರೆ ಅಜಿತ್‌ ಪವಾರ್ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಶಾಸಕ ಸ್ಥಾನದಿಂದ ಅನರ್ಹರಾಗುವ ತೂಗುಗತ್ತಿ ತೂಗುತ್ತಿದೆ. ಈ ಭೀತಿಯಿಂದ ಪಾರಾಗಲು ಹಾಗೂ ಪಕ್ಷವನ್ನು ಒಡೆಯಲು ಅವರಿಗೆ ಒಟ್ಟು 36 ಶಾಸಕರ ಬೆಂಬಲದ ಅಗತ್ಯವಿದೆ. ಎರಡೂ ಸಭೆಗಳಿಗೆ ಹಾಜರಾಗದ ಶಾಸಕರು ಅಜಿತ್ ಬೆಂಬಲಕ್ಕೆ ಇದ್ದಾರೆ‌ ಅಂತ ಅವರ ಬಣ ಹೇಳಿಕೊಂಡಿದೆ. ಅಂದ್ಹಾಗೆ ಎನ್‌ಸಿಪಿ ಒಟ್ಟು 53 ಶಾಸಕರನ್ನು ಹೊಂದಿದೆ. ಇನ್ನು ಪಕ್ಷ ಇಬ್ಭಾಗವಾಗ್ತಿದ್ದಂತೆ ಪಕ್ಷದ ಹೆಸರು ಹಾಗೂ ಚಿಹ್ನೆಗಾಗಿ ಕಿತ್ತಾಟ ಶುರುವಾಗಿದೆ. ಪಕ್ಷದ ಹೆಸರು ಮತ್ತು ಚಿಹ್ನೆ ತಮಗೇ ಸೇರಬೇಕು ಅಂತ ಅಜಿತ್ ಪವಾರ್ ಬಣ ಶೀಘ್ರವೇ ಚುನಾವಣಾ ಆಯೋಗದ ಮೊರೆ ಹೋಗಿದೆ ಎನ್ನಲಾಗಿದೆ. ಆದರೆ ಈ ಸಂಬಂಧ ಶರದ್ ಪವಾರ್ ನೇತೃತ್ವದ ಬಣ ಈಗಾಗಲೇ ಚುನಾವಣಾ ಆಯೋಗಕ್ಕೆ ಕೇವಿಯಟ್ ಸಲ್ಲಿಸಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಮ್ಮ ವಾದ ಆಲಿಸಬೇಕು ಅಂತ ಮನವಿ ಮಾಡಿಕೊಂಡಿದೆ.

 

-masthmagaa.com

Contact Us for Advertisement

Leave a Reply