ಶ್ರೀಶಾಂತ್ ಬಿಜೆಪಿಗೆ..! ಶಶಿ ತರೂರ್ ವಿರುದ್ಧ ಸ್ಪರ್ಧೆ..!

ಐಪಿಎಲ್‍ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಿನ್ನೆಲೆ 7 ವರ್ಷ ಕ್ರಿಕೆಟ್‍ನಿಂದ ನಿಷೇಧಕ್ಕೊಳಗಾಗಿರೋ ಶ್ರೀಶಾಂತ್ ಬಿಜೆಪಿ ಸೇರೋ ಮಾತಾಡಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರೋ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಶಶಿ ತರೂರ್ ಎದುರು ಅಖಾಡಕ್ಕೆ ಇಳಿಯುತ್ತೇನೆ. ತಿರುವನಂತಪುರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಅಂತ ಹೇಳಿದ್ದಾರೆ. ಅಲ್ಲದೆ ಶಶಿ ತರೂರ್ ಮೇಲೆ ನನಗೆ ತುಂಬಾ ಗೌರವ ಇದೆ. ಅವರು ನನ್ನ ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಏಕೈಕ ವ್ಯಕ್ತಿ. ಆದರೂ ಅವರನ್ನು ತಿರುವನಂತಪುರಂ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸುತ್ತೇನೆ ಅಂತ ಹೇಳಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಾಗ ಶ್ರೀಶಾಂತ್ ಜೀವನ ಪರ್ಯಂತ ಕ್ರಿಕೆಟ್ ಆಡದಂತೆ ನಿಷೇಧ ಹೇರಲಾಗಿತ್ತು. ಆದ್ರೆ ಕಳೆದ ಮಾರ್ಚ್ 15ರಂದು ಈ ಜೀವನ ಪರ್ಯಂತ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು.

Contact Us for Advertisement

Leave a Reply