ವಿಶ್ವಕಪ್‌ನಲ್ಲಿ ವಿಜಯ ಯಾತ್ರೆ ಮುಂದುವರೆಸಿದ ಭಾರತ: ಸೇಮಿಸ್‌ಗೆ ಪ್ರವೇಶ!

masthmagaa.com:

ನಿನ್ನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್‌ ವಿರುದ್ದ ಬೆಂಗಳೂರಿನಲ್ಲಿ 160 ರನ್‌ಗಳ ಮೂಲಕ ಭರ್ಜರಿ ಜಯಗಳಿಸುವ ಮೂಲಕ ಲೀಗ್‌ನಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿ ಫೈನಲ್‌ ಪ್ರವೇಶೀಸಿದ ಮೊದಲ ತಂಡವಾಗಿ ಟೀಮ್‌ ಇಂಡಿಯಾ ತನ್ನ ಪ್ರಾಬಲ್ಯ ಮೆರೆದಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ, ಶ್ರೇಯಸ್‌ ಅಯ್ಯರ್‌ 128 ರನ್‌ಗಳ ಭರ್ಜರಿ ಶತಕ ಬಾರಿಸಿದರು ಹಾಗೂ ಕನ್ನಡಿಗ ಕೆ.ಎಲ್‌.ರಾಹುಲ್‌ ಕೇವಲ 64 ಎಸೆತಗಳಲ್ಲಿ ಶತಕ ಹೊಡಿಯುವ ಮೂಲಕ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ದಾಖಲಿಸಿದ ಭಾರತೀಯ ಆಟಗಾರ ಅನ್ನೊ ಖ್ಯಾತಿಗೆ ಪಾತ್ರರಾದರು. ರೋಹಿತ್, ಕೊಹ್ಲಿ, ಗಿಲ್‌ ತಲಾ ಅರ್ಧ ಶತಕ ಬಾರಿಸುವುದರೊಂದಿಗೆ 410 ರನ್ನಗಳ ಬೃಹತ್ತ್‌ ಟಾರ್ಗೆಟ್‌ ನೀಡಿತ್ತು, ಗುರಿ ಬೆನ್ನತ್ತಿದ ನೆದರ ಲ್ಯಾಂಡ್‌ಗೆ ಭಾರತೀಯ ಬೌಲರ್‌ಗಳು ಪೆವಿಲಿಯನ್‌ ಹಾದಿ ತೋರಿಸಿದ್ರು. ಸಿರಾಜ್‌, ಬೂಮ್ರಾ, ಕುಲ್‌ದೀಪ್‌, ಜಡೇಜಾ ತಲಾ 2 ವಿಕೆಟ್‌ ಪಡೆದರು. ಪಾರ್ಟ್‌ ಟೈಮ್‌ ಬೌಲರ್‌ಗಳಾದ ವಿರಾಟ್‌, ರೋಹಿತ್‌ ತಲಾ ಒಂದು ವೀಕೆಟ್‌ ಪಡೆದು ಸಂಭ್ರಮಿಸಿದರು. 47.5 ಓವರನಲ್ಲಿ ನೆದರ್‌ಲ್ಯಾಂಡ್‌ 250ಕ್ಕೆ ಆಲೌಟ ಆಯಿತು.

-masthmagaa.com

Contact Us for Advertisement

Leave a Reply