ಗ್ರಾಫೈಟ್‌ ಇಂಡಿಯಾ ಷೇರುಗಳಲ್ಲಿ ದಿಢೀರ್‌ ಏರಿಕೆ: ಜೆಫ್ರೀಸ್‌ ವರದಾನ!

masthmagaa.com:

ಗ್ರಾಫೈಟ್‌ ಇಂಡಿಯಾ ಷೇರುಗಳು ಗುರುವಾರ ಕಳೆದ 8 ತಿಂಗಳ ಗರಿಷ್ಟ ಲಾಭ ಗಳಿಸಿವೆ. ಬ್ರೋಕರೇಜ್‌ ಕಂಪನಿ ಜೆಫ್ರೀಸ್‌, ಗ್ರಾಫೈಟ್‌ ಇಂಡಿಯಾ ಶೇರುಗಳ ಖರೀದಿಗೆ ರೆಕಮೆಂಡ್ ಮಾಡಿತ್ತು. ಅದರಂತೆ ಹೂಡಿಕೆದಾರರು ಕಂಪನಿಗೆ ಹಣ ಸುರಿದಿದ್ದಾರೆ. ಇದ್ರ ಜೊತೆಗೆ ಜೆಫ್ರೀಸ್‌, ಗ್ರಾಫೈಟ್‌ ಇಂಡಿಯಾದ ಪ್ರೈಸ್‌ ಟಾರ್ಗೆಟ್ಟನ್ನ ₹543 ರಿಂದ ₹650ಕ್ಕೆ ಏರಿಸಿದೆ. ಆದ್ರೆ ಸದ್ಯ ಈಗ ಕಂಪನಿ ಷೇರುಗಳು ₹591ರ ಆಸುಪಾಸಿನಲ್ಲಿದೆ. ಗುರುವಾರದ ಅತಿ ಗರಿಷ್ಟ ಒಂದು ದಿನದ ಲಾಭದಿಂದಾಗಿ ಷೇರುಗಳು ₹600ರ ಗಡಿಗೆ ಬಂದಿವೆ. ಇನ್ನು ಗ್ರಾಫೈಟ್‌ ಇಂಡಿಯಾ ಕಂಪನಿ, ಎಲೆಕ್ಟ್ರಿಕ್‌ ಆರ್ಕ್‌ ಫರ್ನೇಸ್‌ (EAF) ಅನ್ನೋ ಹೊಸ ಸ್ಟೀಲ್‌ ಉತ್ಪಾದನೆ ಟೆಕ್ನಿಕ್‌ ಅಳವಡಿಸಿಕೊಳ್ಳೋಕೆ ಸಜ್ಜಾಗಿದೆ ಅಂತಲೂ ಜೆಫ್ರೀಸ್‌ ಹೇಳಿದೆ. ಇನ್ನು ಇದೇ ಜೆಫ್ರೀಸ್‌ ಭಾರತ 2027ಕ್ಕೆ ಮೂರನೇ ಅತೀ ದೊಡ್ಡ ಎಕಾನಮಿ ಆಗಲಿದೆ. ಭಾರತದ ಮಾರುಕಟ್ಟೆ ಬಂಡವಾಳ ಆ ಟೈಮ್‌ಗೆ $10 ಟ್ರಿಲಿಯನ್‌ ಡಾಲರ್‌ ತಲುಪಲಿದೆ ಅಂತ ಪ್ರೊಜೆಕ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply