ಗೋಧಿ ರಫ್ತು ನಿಷೇಧ: ಭಾರತದ ಮೇಲೆ ಜಿ7 ದೇಶಗಳು ಗರಂ

masthmagaa.com:

ಭಾರತ ಗೋದಿಯನ್ನ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುವುದನ್ನ ನಿಲ್ಲಿಸಿದೆ. ಇದನ್ನ ಜಿ7 ದೇಶದ ಕೃಷಿ ಮಂತ್ರಿಗಳು ಖಂಡಿಸಿದ್ದಾರೆ. ಆದ್ರೆ ಭಾರತದಲ್ಲಿ ಗೋದಿಯ ಬೆಲೆ ಏರುತ್ತಾ ಇರೋದನ್ನ ಕಂಟ್ರೋಲ್‌ ಮಾಡಲು ಈ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಇನ್ನು ಪ್ರತಿಯೊಬ್ಬರು ರಪ್ತು ಮಾಡೋದನ್ನ ನಿಲ್ಲಿಸಿದ್ರೆ, ರಫ್ತಿನ ಮೇಲೆ ನಿರ್ಬಂಧ ವಿಧಿಸಿದ್ರೆ ಈಗಿರುವ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗುತ್ತೆ ಅಂತ ಜರ್ಮನ್‌ ಕೃಷಿ ಸಚಿವ ಸೆಮ್ ಓಜ್ಡೆಮಿರ್ ಹೇಳಿದ್ದಾರೆ. ಆದ್ರೆ ಭಾರತದಲ್ಲಿ ಬೀಸುತ್ತಿರುವ ಬಿಸಿಗಾಳಿಯ ಕಾರಣ ಗೋದಿ ಬೆಳೆಯಲ್ಲಿ ತೀವ್ರ ಕುಸಿತ ಕಂಡಿದೆ. ಇನ್ನು ಭಾರತದಲ್ಲಿ ಆಹಾರ ಭದ್ರತೆಯನ್ನ, ಕೈಗೆಟುಕುವ ದರದಲ್ಲಿ ಆಹಾರ ಉತ್ಪನ್ನ ಸಿಗಲಿ ಎಂದು ಈ ನಿರ್ಧಾರವನ್ನು ಮಾಡಲಾಗಿದೆ. ಆದಷ್ಟು ಬೇಗ ನೆರೆ ಹೊರೆಯ ದೇಶಗಳಿಗೆ ಆದಷ್ಟು ಬೇಗ ಗೋದಿಯನ್ನ ಪೂರೈಕೆ ಮಾಡ್ತೇವೆ ಅಂತ ಅಂತ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply