ನನ್ನನ್ನ ‘ಇಂಜಿನಿಯರ್ ಬೊಮ್ಮಾಯಿ’ ಅಂತ ಕರೆದರೆ ಖುಷಿ

masthmagaa.com:

ಇವತ್ತು ಸರ್‌ ಎಂ. ವಿಶ್ವೇಶ್ವರಯ್ಯ ಅವರ 161ನೇ ಜಯಂತಿ. ಇದನ್ನ ಭಾರತದಲ್ಲಿ ಇಂಜಿನಿಯರ್ಸ್​ ಡೇ ಅನ್ನಾಗಿ ಆಚರಿಸಲಾಗುತ್ತೆ. ಈ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರಯ್ಯರ ಜನ್ಮ ದಿನವನ್ನ ಶ್ರಮಜೀವಿಗಳಿಗೆ ಅರ್ಪಿಸ್ತೇನೆ. ಯಾಕಂದ್ರೆ ಶ್ರಮಜೀವಿಗಳು ಇಲ್ಲದೇ ಇದ್ರೆ ಇಂಜಿನಿಯರ್ಗಳು ಡ್ರಾಯಿಂಗ್‌ ಬಾಕ್ಸ್‌ನಲ್ಲಿ ಕಳೆದುಹೋಗ್ತಾ ಇದ್ರು ಅಂತ ಹೇಳಿದ್ರು. ಇದೇ ವೇಳೆ ನನನ್ನ ಇಂಜಿನಿಯರ್‌ ಬೊಮ್ಮಾಯಿ ಅಂತ ಕರೆದ್ರೆ ಖುಷಿಯಾಗುತ್ತೆ ಅಂದ್ರು. ಬೊಮ್ಮಾಯಿ ಕೂಡ ಮೆಕಾನಿಕಲ್‌ ಇಂಜಿನಿಯರಿಂಗ್ ಓದಿದ್ದಾರೆ. ಅತ್ತ ಪ್ರಧಾನಿ ಮೋದಿ ಕೂಡ, ಇಂಜಿನಿಯರ್​ಗಳಿಲ್ಲದೆ ಈ ಜಗತ್ತು ಇಷ್ಟೆಲ್ಲಾ ಅಭಿವೃದ್ಧಿಯಾಗೋ ಸಾಧ್ಯವಾಗುತ್ತಿರಲಿಲ್ಲ ಅಂತ ಹೇಳಿದ್ದಾರೆ. ಅಂದ್ಹಾಗೆ ಒಂದೊಂದು ದೇಶದಲ್ಲಿ ಒಂದೊಂದು ದಿನವನ್ನ ಇಂಜಿನಿಯರ್ಸ್ ಡೇ ಆಗಿ ಆಚರಿಸ್ತಾರೆ. ಜಾಗತಿಕವಾಗಿ ಮಾರ್ಚ್​ 4 ಅನ್ನ ಇಂಜಿನಿಯರ್ಸ್ ಡೇ ಅಂತ ಕರೆಯಲಾಗುತ್ತೆ.

-masthmagaa.com

Contact Us for Advertisement

Leave a Reply