ವೃತ್ತಿಪರ ಕೋರ್ಸ್‌ಗೆ ಸೇರ್ಬೇಕು ಅಂತಿರೋ ವಿಧ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಶಾಕ್‌! ಏನು?

masthmagaa.com:

ಎಂಜಿನಿಯರಿಂಗ್‌ ಹಾಗೂ ಇನ್ನಿತರೆ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಇಚ್ಚಿಸುತ್ತಿರೋ ವಿಧ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಪ್ರೊಫೆಷನಲ್‌ ಕೋರ್ಸ್‌ ಅಥವಾ ವೃತ್ತಿಪರ ಶಿಕ್ಷಣದ ಪ್ರವೇಶ ಶುಲ್ಕವನ್ನ‌ ಶೇ 10ಕ್ಕೆ ಏರಿಸಲಾಗಿದೆ ಅಂತ ಉನ್ನತ ಶಿಕ್ಷಣ ಸಚಿವ ಅಶ್ವತ್‌ ನಾರಾಯಣ್‌ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡಿರಲಿಲ್ಲ. ಆದ್ರೆ ಖಾಸಗೀ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ 25% ಫೀಸ್‌ ಜಾಸ್ತಿ ಮಾಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇಂದು ಆ ಒಕ್ಕೂಟದ ಜೊತೆಗೆ ಸಭೆ ನಡೆಸಿದ್ದು ಪ್ರವೇಶ ಶುಲ್ಕ ಜಾಸ್ತಿ ಮಾಡಿದ್ದೀವಿ ಅಂತ ಹೇಳಿದ್ದಾರೆ. ಅಲ್ಲದೇ ಖಾಸಗೀ ಸಂಸ್ಥೆಗಳು ನಮಗೆ ಶೇ 25 ರಷ್ಟು ಜಾಸ್ತಿ ಮಾಡೋಕೆ ಬೇಡಿಕೆ ಇಟ್ಟಿದ್ವು. ಆದ್ರೆ ನಮ್ಮ ಶುಲ್ಕ ನಿಗದಿ ಸಮಿತಿ ಶೇ10 ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ಈಗ ಅದೇ ರೀತಿ ನಿರ್ಧಾರ ಮಾಡಿದ್ದೀವಿ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply