ಜನಾಂಗೀಯ ಹೇಳಿಕೆ ನೀಡಿದ ಪಿತ್ರೋಡಾ: ಮೋದಿಯಿಂದ ತೀರುಗೇಟು!

masthmagaa.com:

ಕಾಂಗ್ರೆಸ್‌ನ ಓವರ್‌ಸೀಸ್‌ ಚೇರಮನ್‌ ಸ್ಯಾಮ್‌ ಪಿತ್ರೋಡಾ ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದಾರೆ. ಆಸ್ತಿ ತೆರಿಗೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಮುಜುಗರಕ್ಕೀಡಾಗುವಂತೆ ಮಾಡಿದ್ದ ಪಿತ್ರೋಡಾ, ಈಗ ಜಾನಾಂಗೀಯ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಭಾರತೀಯರ ವೈವಿಧ್ಯತೆ ವಿಚಾರವಾಗಿ ಮಾತನಾಡ್ತಾ.. ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸ್ತಾರೆ. ಪಶ್ಚಿಮದ ಜನ ಅರಬ್‌ರಂತೆ ಇದ್ದಾರೆ. ಇನ್ನು ಪೂರ್ವದವ್ರು ಚೈನೀಸ್‌ಗಳ ತರ ಕಾಣ್ತಾರೆ. ಉತ್ತರದವ್ರು ಬಿಳಿಬಣ್ಣೀಯರಾಗಿದ್ದಾರೆ ಅಂತೇಳಿದ್ದಾರೆ. ಇವ್ರ ಮಾತಿಗೆ ಕೂಡಲೇ ರಪ್ಲೈ ನೀಡಿರೋ ಪ್ರಧಾನಿ ಮೋದಿ, ತೆಲಂಗಾಣದ ವಾರಂಗಲ್‌ನಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡೋ ವೇಳೆ, ಶಹಜಾದ ಅಂದ್ರೆ ಕಾಂಗ್ರೆಸ್ ರಾಜಕುಮಾರ.. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸ್ಯಾಮ್‌ ಪಿತ್ರೊಡ ಹೇಳಿಕೆಗೆ ಉತ್ತರ ನೀಡಲೇಬೇಕು. ಅಮೆರಿಕದಲ್ಲಿ ತತ್ವಜ್ಞಾನಿ ಅಂತೇಳ್ಕೊಳ್ಳೋ ಶಹಜಾದನ ಅಂದ್ರೆ ರಾಹುಲ್‌ರ ಚಿಕ್ಕಪ್ಪ ಒಬ್ರಿದ್ದಾರೆ. ಅವ್ರು ಕ್ರಿಕೆಟ್‌ನಲ್ಲಿ ಥರ್ಡ್‌ ಅಂಪೈರ್‌ ಇದ್ದಂಗೆ. ರಾಹುಲ್‌ ಆ ಥರ್ಡ್‌ ಅಂಪೈರ್‌ರಿಂದ್ಲೇ ಅಡ್ವೈಸ್‌ ತಗೊತಾರೆ ಅಂತ ಪಿತ್ರೋಡಾ ಹಾಗೂ ರಾಹುಲ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಲ್ದೇ ನನ್ನ ದೇಶವಾಸಿಗಳ ಚರ್ಮದ ವಿಚಾರವಾಗಿ ಅಗೌರ ತೋರೋದನ್ನ ಅವ್ರೆಂದೂ ಸಹಿಸಿಕೊಳ್ಳಲ್ಲ. ನಾನಂತು ಎಂದಿಗೂ ಅದನ್ನ ಸಹಿಸಿಕೊಳ್ಳಲ್ಲ ಅಂತ ಮೋದಿ ಗರಂ ಆಗಿದ್ದಾರೆ. ಅಲ್ದೇ ಯಾವ ವ್ಯಕ್ತಿ ಯಾವ ಬಣ್ಣ ಹೊಂದಿದ್ದರೇನಂತೆ, ನಾವು ನೀಲವರ್ಣದ ಶ್ರೀ ಕೃಷ್ಣರನ್ನ ಆರಾಧಿಸುತ್ತೇವೆ. ಆದ್ರೆ ಈ ವರ್ಷದ ಬಗ್ಗೆ ಹೇಳಿಕೆ ನೀಡಿರೋದ್ರಿಂದ ತುಂಬಾ ಕೋಪ ಬಂದಿದೆ. ಸಂವಿಧಾನವನ್ನ ತಲೆಮೇಲೆ ಇರಿಸಿಕೊಂಡಿರೊ ಜನರೇ ಚರ್ಮದ ಆಧಾರಿತವಾಗಿ ಜನರನ್ನ ಅವಮಾನ ಮಾಡ್ತಿದ್ದಾರೆ. ಆದಿವಾಸಿ ಜನಾಂಗದಿಂದ ಬಂದವರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರನ್ನ ಕಾಂಗ್ರೆಸ್‌ ಏಕೆ ಟೀಕಿಸುತ್ತೆ ಅನ್ನೊದು ಈಗ ಅರ್ಥವಾಗಿದೆ. 3 ಹಂತದ ಚುನಾವಣೆ ನಂತ್ರ ಕಾಂಗ್ರೆಸ್‌ಗೆ ತನ್ನ ಸ್ಥಾನಗಳನ್ನ ಮೈಕ್ರೋಸ್ಕೋಪ್‌ ಇಟ್ಕೊಂಡು ಹುಡುಕೋ ಪರಿಸ್ಥಿತಿ ಬಂದಿದೆ ಅಂತ ಮೋದಿ ಕಾಲೆಳೆದಿದ್ದಾರೆ. NDA ಮೈತ್ರಿಕೂಟದ ವಿಜಯರಥವನ್ನ ಜನ ಮುಂದುರೆಸಲಿದ್ದಾರೆ. ಅಲ್ದೇ ಕಳೆದ ಕೆಲ ವರ್ಷಗಳಿಂದ ಅಂಬಾನಿ, ಅದಾನಿ ವಿರುದ್ದ ಮಾತಾಡ್ತಿದ್ದ ರಾಹುಲ್‌ ಗಾಂಧಿ, ಚುನಾವಣೆ ಹೊತ್ತಲ್ಲೆ ಸೈಲೆಂಟ್‌ ಆಗಿದ್ಯಾಕೆ? ಅವ್ರೊಂದಿಗೆ ರಾಹುಲ್ ಒಪ್ಪಂದ ಮಾಡ್ಕೊಂಡಿದ್ದಾರಾ? ಅಂತ ಮೋದಿ ಪ್ರಶ್ನಿಸಿದ್ದಾರೆ. ಇನ್ನು‌ ಇತ್ತ ಪಿತ್ರೋಡಾ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಭಾರತದ ವೈವಿಧ್ಯತೆಯನ್ನ ವಿವರಿಸೊ ಸಂದರ್ಭದಲ್ಲಿ ಪಿತ್ರೋಡಾ ಈ ರೀತಿ ಜನಾಂಗೀಯ ಹೇಳಿಕೆ ನೀಡಿರೊದು ಸರಿಯಲ್ಲ ಮತ್ತು ಸ್ವೀಕಾರ್ಹವಲ್ಲ ಅಂತ, ಜೈರಾಮ್‌ ರಮೇಶ್‌ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಅತ್ತ ಈ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರೋ ಮಣಿಪುರ ಸಿಎಂ ಬಿರೇನ್‌ ಸಿಂಗ್‌, ಪಿತ್ರೊಡಾ ವಿರುದ್ದ ಕಾನೂನು ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ.

 

-masthmagaa.com

Contact Us for Advertisement

Leave a Reply