ಆರಾಮಾಗಿ ಇರುವುದು ನನಗೆ ಬೋರ್‌ – ಪ್ರಿಯಾಂಕಾ ಚೋಪ್ರಾ..

masthmagaa.com:

ಜನಪ್ರಿಯ ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್‌ ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ನಿಕ್‌ ಜೋನಸ್‌ ಜೊತೆ ಪ್ರಿಯಾಂಕ್‌ ಮದುವೆಯಾದ ಮೇಲೆ ಅಮೆರಿಕಾದಲ್ಲೇ ಸೆಟಲ್‌ ಆಗಿದ್ದಾರೆ. ಏಪ್ರಿಲ್‌ 28ಕ್ಕೆ ಇವರ ʼಸಿಟಾಡೆಲ್‌ʼ ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗಲಿದೆ. ಈ ಸಮಯದಲ್ಲಿ ಪ್ರಿಯಾಂಕಾ ತಮ್ಮ ಹಾಲಿವುಡ್‌ ಎಂಟ್ರಿಯ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಶಾರುಖ್‌ ಖಾನ್‌ ಅವರಿಗೆ ಹಾಲಿವುಡ್‌ ಎಂಟ್ರಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು, ಈ ಬಗ್ಗೆ ಮಾತನಾಡಿದ ಅವರು ನಾನೇಕೆ ಅಲ್ಲಿಗೆ ಹೋಗಬೇಕು? ನಾನು ಇಲ್ಲೇ ಆರಾಮಾಗಿ ಇದ್ದೀನಿ ಎಂದು ಹೇಳಿದ್ದರು. ಈಗ ಈ ಬಗ್ಗೆ ಪ್ರಿಯಾಂಕಾ ಅವರಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು ʼನನಗೆ ಆರಾಮಾಗಿ ಇರುವುದು ಬೋರಿಂಗ್‌, ಹಾಗಂತ ನಾನು ಅಹಂಕಾರಿಯಲ್ಲ. ನಾನು ಶೂಟಿಂಗ್‌ಲ್ಲಿದ್ದಾಗ ಏನು ಮಾಡುತ್ತೇನೆ ಎಂಬ ಅರಿವಿದೆ. ಇನ್ನೊಂದು ದೇಶಕ್ಕೆ ಕಾಲಿಟ್ಟಾಗ ನನ್ನ ಯಶಸ್ಸು ತೆಗೆದುಕೊಂಡು ಹೋಗುವುದಿಲ್ಲ. ನನಗೆ ಆತ್ಮವಿಶ್ವಾಸವಿದೆ. ನಾನೂ ಈಗಲೂ ಆಡಿಶನ್‌ ತೆಗೆದುಕೊಳ್ಳಲು ಸಿದ್ದಳಿದ್ದೇನೆ. ನಾನು ಈಗಲೂ ಕೆಲಸ ಮಾಡಲು ಸಿದ್ದ. ಎಂದು ಹೇಳಿದ್ದಾರೆ. ಈ ಮಾತುಗಳು ಈಗ ತುಂಬಾ ಚರ್ಚೆಗೆ ಕಾರಣವಾಗಿದ್ದು , ಇವರ ಮಾತುಗಳು ಶಾರುಖ್‌ ಖಾನ್‌ ಅವರಿಗೆ ಕೊಟ್ಟ ತಿರುಗೇಟು ಎನ್ನಲಾಗುತ್ತಿದೆ.

-masthmagaa.com

Contact Us for Advertisement

Leave a Reply