‘ಮದುವೆಯಾಗಿ 10 ವರ್ಷದ ನಂತರ ನಾನು ತಾಯಿಯಾಗಲಿದ್ದೇನೆ’: ಉಪಾಸನಾ ರಾಮ್ ಚರಣ್!

masthmagaa.com:

ಟಾಲಿವುಡ್ ಕ್ಯೂಟ್ ಕಪಲ್ಸ್‌ ಅಲ್ಲಿ ರಾಮ್‌ಚರಣ್‌- ಉಪಾಸನಾ ಜೋಡಿ ಕೂಡ ಒಂದು. ನಾಯಕ ನಟನಾಗಿ ಸಿನಿಮಾರಂಗಕ್ಕೆ ಕಾಲಿಟ್ಟ 5 ವರ್ಷಕ್ಕೆ ನಟ ರಾಮ್‌ಚರಣ್ ಅಪೋಲೋ ಹಾಸ್ಪಿಟಲ್ಸ್ ಒಡೆಯನ ಮೊಮ್ಮಗಳನ್ನು ಪ್ರೀತಿಸಿ ಮದುವೆ ಆಗಿದ್ದರು.ಮದುವೆಯಾಗಿ 10 ವರ್ಷಗಳ ನಂತರ ದಂಪತಿ ಈಗ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಉಪಾಸನಾ ಈ ಬಗ್ಗೆ ಶುಭ ಸಂದೇಶ ಕೊಟ್ಟಿದ್ದಾರೆ. ʻʻನಾನು ಅಮ್ಮ ಆಗುತ್ತೇನೆ ಅಂತಾ ಹೇಳೊದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತದೆ ಹಾಗೂ ಇದು ಸ್ವತಃ ನಮ್ಮ ನಿರ್ಧಾರ. ನಮಗೆ ಯಾವಾಗ ಬೇಕೊ ಆವಾಗ ನಾವು ಪೇರೆಂಟ್ಸ್‌ ಆಗುತ್ತಿದ್ದೇವೆ , ಸಮಾಜ ಯಾವಾಗ ಹೇಳುತ್ತದೆಯೋ ಆವಾಗ ಅಲ್ಲ. ನಾವೀಗ ಆರ್ಥಿಕವಾಗಿ ಚೆನ್ನಾಗಿದ್ದೇವೆ ಹಾಗಾಗಿ ಈಗ ನಾವು ನಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಯಾವುದೇ ಒತ್ತಡ ಇಲ್ಲದೆ ನಾವೀಗ ಈ ನಿರ್ಧಾರ ಮಾಡಿದ್ದೇವೆ.ʼʼ ಎಂದು ಉಪಾಸನಾ ಹೇಳಿದ್ದಾರೆ.

ಇತ್ತೀಚೆಗಷ್ಟೆ ರಾಮ್‌ ಚರಣ್ ಆಸ್ಕರ್‌ ಕ್ಯಾಂಪೆನ್‌ಗಾಗಿ US ಪ್ರಾಯಾಣದಲ್ಲಿದ್ದಾಗ, ಉಪಾಸನಾ ಕೂಡ ಅವರ ಜೊತೆ ಇದ್ದರು. ಆವಾಗ ಅವರು ನಮಗೆ ಪ್ರೀತಿ ತೋರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿ ಮುಖ್ಯವಾಗಿ ನನಗೆ ಪ್ರಯಾಣ ಮಾಡಲು ಸಹಾಯ ಮಾಡುತ್ತಿರುವ ನನ್ನ ಮಗುವಿಗೆ ಎಂದು ತಾವು ತಾಯಿ ಆಗುತ್ತಿರುವ ಬಗ್ಗೆ ಸುಳಿವು ನೀಡಿದ್ದರು.
ಲಂಡನ್ ರೀಜೆಂಟ್ಸ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿರುವ ಉಪಾಸನಾ ಅಪೋಲೊ ಸಮೂಹದ ಅಪೋಲೊ ಲೈಫ್ ವಿಭಾಗದ ಉಪಾಧ್ಯಕ್ಷೆ ಆಗಿದ್ದಾರೆ.
ಸದ್ಯ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಚಿತ್ರದಲ್ಲಿ ನಟ ರಾಮ್‌ಚರಣ್ ನಟಿಸ್ತಿದ್ದಾರೆ. ನಂತರ ‘ಉಪ್ಪೆನ’ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply