“ಪ್ರೀತಿ ವಿಷಯದಲ್ಲಿ ನಾನು ನತದೃಷ್ಟ”: ಕೊನೆಗೂ ಸತ್ಯ ಬಿಚ್ಚಿಟ್ಟ ಸಲ್ಮಾನ್‌ ಖಾನ್‌!

masthmagaa.com:

ಹಲವಾರು ವರ್ಷಗಳ ನಂತರ ಸಲ್ಮಾನ್‌ ಖಾನ್‌ ತನ್ನ ಎಲ್ಲಾ ಮಾಜಿ ಪ್ರೇಯಸಿಯರನ್ನ ನೆನಪು ಮಾಡಿಕೊಂಡಿದ್ದಾರೆ. ಸಲ್ಮಾನ್, ಸೋಮಿ ಅಲಿ, ಸಂಗೀತಾ ಬಿಜ್ಲಾನಿ, ಐಶ್ವರ್ಯಾ ರೈ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಸಲ್ಮಾನ್‌ ಡೇಟಿಂಗ್ ಮಾಡಿದ್ದಾರೆ ಅನ್ನೋದು ಹಳೆ ಸುದ್ದಿ. ಹಲವಾರು ವರದಿಗಳ ಪ್ರಕಾರ, ಸಲ್ಮಾನ್ ಕೊನೆಯದಾಗಿ ಯೂಲಿಯಾ ವಂತೂರ್ ಜೊತೆ ಡೇಟ್‌ ಮಾಡಿದ್ರು. ಹಲವಾರು ಪಾರ್ಟಿ ಮತ್ತು ಫಂಕ್ಷನ್‌ಗಳಲ್ಲಿ ಇಬ್ಬರೂ ಕೂಡ ಒಟ್ಟಿಗೆ ಕಾಣಿಸಿಕೊಳ್ತಾ ಇದ್ರು. ಸದ್ಯಕ್ಕೆ ತಮ್ಮ ಲವ್‌ ಬ್ರೇಕಪ್‌ಗಳ ಬಗ್ಗೆ ಸಲ್ಮಾನ್‌ ಮೊದಲ ಬಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ಆಪ್‌ ಕಿ ಅದಾಲತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್‌ ಖಾನ್‌ ” ಪ್ರೀತಿ ವಿಚಾರದಲ್ಲಿ ನಾನು ದುರದೃಷ್ಟ ಅಂತಾನೆ ಹೇಳಬಹುದು. ಲವ್‌ ವಿಷಯದಲ್ಲಿ ನಂದೇನೂ ತಪ್ಪಿಲ್ಲ. ಮೊದಲನೆಯಯವರು ಬಿಟ್ಟೋದಾಗ ತಪ್ಪು ಅವರ್ದೇ ಆಗಿತ್ತು, ಎರಡನೆಯವರು ಬಿಟ್ಟೊದಾಗ್ಲೂ ಸಹ ತಪ್ಪು ಅವರದ್ದೇ. ಮೂರನೇ ಅವರು ಬಿಟ್ಟೊದಾಗ್ಲೂ ತಪ್ಪು ಅವರದ್ದೇ, ಅದರೆ ನಾಲ್ಕನೇ ವ್ಯಕ್ತಿ ಬಿಟ್ಟೋದಾಗ ನನಗೆ ಡೌಟ್‌ ಬಂತು, ತಪ್ಪು ನಂದಾ ಅಥ್ವಾ ಅವ್ರದಾ ಅಂತ. ಆದರೆ ಐದನೇ ವ್ಯಕ್ತಿ ಹೋದಾಗ ನನ್ನ ತಪ್ಪು 60% ಇತ್ತು ಅವರದ್ದು 40% ಇತ್ತು. ಹೆಚ್ಚು ಜನ ನನ್ನನ್ನ ಬಿಟ್ಟೋದಾಗ ತಪ್ಪು ನಂದೇ ಅಂತ ಅಂತಾರೆ, ಆದರೆ ಇದರಲ್ಲಿ ಯಾರ್ದೂ ತಪ್ಪಿಲ್ಲ. ಆದರೆ ನನಗೆ ನಾನು ಗೆದ್ದಿದ್ದೇನೆ ಎಂಬ ಖುಷಿ ಇದೆ. ಯಾಕಂದ್ರೆ ನಾನು ಅವರಿಗೆ ಕೊಡದೇ ಇರುವಂತ ಖುಷಿ, ಸಂತೋಷವನ್ನ ಅವರೇ ಹುಡ್ಕೊಂಡು ಹೋಗಿ ಇವಾಗ ಖುಷೀಲಿ ಇದಾರೆ ಅನ್ನೋ ನಂಬಿಕೆ ನನಗಿದೆ.” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply