ಐಎಸ್​ಐಗೆ ಹೊಸ ಮುಖ್ಯಸ್ಥ ಮತ್ತು ಹೊಸ ವಿವಾದ!

masthmagaa.com:

ಇತ್ತೀಚೆಗಷ್ಟೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐಗೆ ಹೊಸ ಮುಖ್ಯಸ್ಥರನ್ನಾಗಿ ಜನರಲ್ ನದೀಂ ಅಂಜುಮ್ ಹೆಸಸರನ್ನ ಘೋಷಿಸಲಾಗಿತ್ತು. ಇದೀಗ ಅವರ ನೇಮಕದ ಉಳಿದ ಪ್ರಕ್ರಿಯೆ ಶುರುವಾಗಿದೆ. ಇದಕ್ಕೂ ಮುನ್ನ ಇವರ ನೇಮಕ ಸಂಬಂಧ ಭಾರಿ ವಿವಾದವಾಗಿತ್ತು. ಯಾಕಂದ್ರೆ ಈ ಹಿಂದೆ ಐಎಸ್​ಐ ಮುಖ್ಯಸ್ಥರಾಗಿದ್ದ ಫೈಜ್ ಹಮೀದ್​​​ರನ್ನೇ ಐಎಸ್​ಐ ಮುಖ್ಯಸ್ಥರಾಗಿ ಮುಂದುವರಿಸಬೇಕು ಅನ್ನೋದು ಇಮ್ರಾನ್ ಖಾನ್ ಆಸೆ ಅಂತ ವರದಿಯಾಗಿತ್ತು. ಆದ್ರೆ ಅವರನ್ನು ಬದಲಿಸಬೇಕು ಅನ್ನೋದು ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ನಿರ್ಧಾರವಾಗಿತ್ತು. ಅಕ್ಟೋಬರ್ 6ರಂದು ಸೇನೆಯ ಮಾಧ್ಯಮ ಐಎಸ್​ಪಿಆರ್​​ ಈ ಬಗ್ಗೆ ಮೊದಲು ಮಾಹಿತಿ ನೀಡಿತ್ತು. ಇದೀಗ ಕೊನೆಗೂ ಇಮ್ರಾನ್ ಖಾನ್ ಮತ್ತು ಖಮರ್ ಜಾವೇದ್ ಬಜ್ವಾ ನಡುವೆ ಮೀಟಿಂಗ್ ನಡೆದಿದ್ದು, ಕೊನೆಗೂ ಒಮ್ಮತಕ್ಕೆ ಬರಲಾಗಿದೆ. ಐಎಸ್​ಐ ಮುಖ್ಯಸ್ಥರನ್ನಾಗಿ ಜನರಲ್ ನದೀಂ ಅಂಜುಮ್ ನೇಮಕದ ಪ್ರಕ್ರಿಯೆ ಶುರು ಮಾಡಲಾಗಿದೆ.

ಈ ನಡುವೆ ಫೈಜ್ ಹಮೀದ್ ಬದಲಾವಣೆಗೆ ಕಾರಣ ಏನು ಅನ್ನೋದು ತುಂಬಾ ಚರ್ಚೆಯಾಗ್ತಿದೆ. ಪ್ರಮುಖವಾಗಿ, ಅಫ್ಘಾನಿಸ್ಥಾನ ಸರ್ಕಾರ ರಚನೆ ವೇಳೆ ಅಲ್ಲಿಗೆ ಹೋಗಿದ್ದ ಐಎಸ್​ಐ ಮುಖ್ಯಸ್ಥ ಫೈಜ್ ಹಮೀದ್​ ಫುಲ್ ಪಬ್ಲಿಕ್ಕಾಗಿ ಕಾಣಿಸಿಕೊಂಡಿದ್ರು. ಅಲ್ಲದೆ ಅವರ ಪವರ್ ಕೂಡ ನಿರಂತರವಾಗಿ ಹೆಚ್ಚುತ್ತಲೇ ಇತ್ತು. ಅಫ್ಘಾನಿಸ್ತಾನದ ಎಲ್ಲಾ ಮುಜಾಹಿದ್​​ಗಳ ನಿಯಂತ್ರಣ ಇರೋದು ಐಎಸ್​ಐ ಬಳಿ. ಹೀಗಾಗಿ ಅದ್ರ ಮುಖ್ಯಸ್ಥನ ಬದಲಾವಣೆಗೆ ಪಾಕ್ ಸೇನಾ ಮುಖ್ಯಸ್ಥ ನಿರ್ಧರಿಸಿದ್ರು ಅನ್ನೋದು ಒಂದು ವಾದ.. ಮತ್ತೊಂದು ಕಡೆ ಫೈಜ್ ಹಮೀದ್​​ರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡಲು ಈ ದಾರಿಯಲ್ಲಿ ಹೋಗಲಾಗ್ತಿದೆ ಅಂತ ಕೂಡ ಹೇಳಲಾಗ್ತಿದೆ. ಅಂದ್ರೆ ಲೆಫ್ಟಿನೆಂಟ್ ಜನರಲ್ ಆಗಿದ್ದ ಫೈಜ್ ಹಮೀದ್ 2019ರಲ್ಲಿ ಐಎಸ್​ಐ ಮುಖ್ಯಸ್ಥರಾಗಿ ಆಯ್ಕೆಯಾಗಿದ್ರು. ಇವರು ನೇರವಾಗಿ ಸೇನಾ ಮುಖ್ಯಸ್ಥರಾಗಲು ಸಾಧ್ಯವಿಲ್ಲ. ಹೀಗಾಗಿ ಪೇಶಾವರ್ ಕೋರ್ ಕಮಾಂಡರ್ ಆಗಿ ನಿಯೋಜಿಸಲಾಗಿದೆ. ಈ ಕೋರ್ ಕಮಾಂಡರ್ ಹುದ್ದೆ ನಿರ್ವಹಿಸಿದರೆ ಫೈಜ್ ಹಮೀದ್​ ಸೇನಾ ಮುಖ್ಯಸ್ಥರಾಗೋ ಅವಕಾಶವನ್ನು ಪಡ್ಕೊಳ್ತಾರೆ. ಹೀಗಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತ ಕೂಡ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply