ಇದೇ ಕಾರಣಕ್ಕೆ ಕೊಹ್ಲಿಯಿಂದ ಇಂಪ್ರೆಸ್ ಆದೆ: ಅನುಷ್ಕಾ ಶರ್ಮಾ!

masthmagaa.com

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ಮದುವೆಯಾಗುವ ಮೊದಲು ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ಅನುಷ್ಕಾ ಈಗ ವಿರಾಟ್ ಕೊಹ್ಲಿಯ ಬಗ್ಗೆ ಇಂಪ್ರೆಸ್‌ ಆದಂತ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ತಮ್ಮ ಸೋಷಿಯಲ್‌ ಮೀಡಿಯಾ ಮುಖಾಂತರ ಆಗಾಗ ರಿಲೇಷನ್‌ಶಿಪ್‌ ಗೋಲ್ಸ್‌ಗಳ ಬಗ್ಗೆ ಹೇಳ್ತಾ ಇರ್ತಾರೆ.

ಇಬ್ಬರೂ ಕೂಡ ಅವರಿಗೆ ಇಷ್ಟ ಬಂದಂತೆ ಇರಬಹುದು ಅಥ್ವಾ ಲೈಫ್‌ನ್ನ ಎಂಜಾಯ್‌ ಮಾಡಬಹುದು ಎಂಬುದು ಇವರಿಬ್ಬರ ಅಭಿಪ್ರಾಯ. ಡೇಟಿಂಗ್‌ ಸ್ಟಾರ್ಟ್‌ ಮಾಡೋದಕ್ಕಿಂತ ಮೊದಲು ಇವರಿಬ್ಬರೂ ಒಳ್ಳೆ ಪ್ರೆಂಡ್ಸ್‌ ಆಗಿದ್ರು, ಫನ್‌ ಚಾಟ್‌ ಮಾಡುವಾಗ ವಿರಾಟ್‌ ಅವರ ಯಾವ ಗುಣ ಅನುಷ್ಕಾನ ಇಂಪ್ರೆಸ್‌ ಮಾಡಿತ್ತು ಅನ್ನೋದರ ಬಗ್ಗೆ ಹೇಳಿದ್ದಾರೆ.

ಸ್ಟಾರ್‌ ಸ್ಪೊರ್ಟ್ಸ್‌ ಕಾರ್ಯಕ್ರಮದ ಸಂವಾದದಲ್ಲಿ ಅನುಷ್ಕಾ ವಿರಾಟ್‌ ಕೊಹ್ಲಿಯ ಮೆಮೊರಿ ಪವರ್‌ ಚೆನ್ನಾಗಿದೆ ಅಂತ ಹೇಳಿದ್ರು. ಇದೇ ವಿಷಯಕ್ಕೆ ಕೊಹ್ಲಿ ಉತ್ತರಿಸಿ “ನನ್ನ ನೆನಪಿನ ಶಕ್ತಿ ಸ್ವಲ್ಪ ಚೆನ್ನಾಗಿದೆ. ಅನುಷ್ಕಾ ನನಗೆ ನೆನಪಿಡೋಕೆ ಇಂಪಾರ್ಟೆಂಟ್‌ ದಿನಾಂಕಗಳನ್ನು ಕೊಡ್ತಾಳೆ. ಆದ್ದರಿಂದ, ನಾನು ಆ ದಿನಾಂಕವನ್ನ ಸರಿಯಾಗಿ ನೆನಪಿಟ್ಟುಕೊಳ್ತೇನೆ. ಅವಳು ನನಗೆ ಮೊದಲೇ ನನಗೆ ಹಾನೆಸ್ಟ್‌ ಆಗಿ ಇರಬೇಕು ನಾನು ಪ್ರಮುಖ ವಿಷಯಗಳನ್ನು ನೆನಪಿಟ್ಟುಕೊಳ್ಳುತ್ತೇನೆ, ಕೆಲವೊಮ್ಮೆ ಸಣ್ಣ ಸಣ್ಣ ವಿಷಯಗಳನ್ನ ಮರೆತುಬಿಡುತ್ತೇನೆ.” ಅಂತ ಹೇಳಿದ್ದರು.
“ಹೌದು, ಅವರ ಮೆಮೊರಿ ಪವರ್‌ ತುಂಬಾನೆ ಚೆನ್ನಾಗಿದೆ, ಇದು ನನಗೆ ತುಂಬಾನೆ ಹೆಲ್ಪ್‌ ಆಗತ್ತೆ ಇದೇ ಅವರ ಗುಣ ನನಗೆ ತುಂಬಾನೇ ಇಂಪ್ರೆಸ್‌ ಆಗಿತ್ತು.” ಅಂಥ ಹೇಳಿದ್ರು.

-masthmagaa.com

Contact Us for Advertisement

Leave a Reply