ಅಮೆರಿಕ ಕೈವಾಡ ಎನ್ನುತ್ತಲೇ ‘ಅಧಿಕಾರಿ’ಯ ಹೆಸರು ತೆಗೆದ ಇಮ್ರಾನ್

masthmagaa.com:

ಪಾಕಿಸ್ತಾನದಲ್ಲಿ ಉಂಟಾಗಿರೋ ರಾಜಕೀಯ ಬಿಕ್ಕಟ್ಟಿನ ಹಿಂದೆ ಅಮೆರಿಕ ಕೈವಾಡ ಇದೆ ಅಂತೇಳ್ತಿದ್ದ ಇಮ್ರಾನ್​ ಖಾನ್ ಇದೇ ಮೊದಲ ಬಾರಿಗೆ ಅಮೆರಿಕದ ಯಾವ ಅಧಿಕಾರಿಯಿಂದ ಬೆದರಿಕೆ ಬಂದಿದೆ ಅನ್ನೋದನ್ನ ಬಾಯ್ಬಿಟ್ಟಿದ್ಧಾರೆ. ಅವರ ಹೆಸರು ಡೊನಾಲ್ಡ್ ಲು ಅಂತ.. ಇವರು ಅಮೆರಿಕದ ಅಸಿಸ್ಟೆಂಟ್​ ಸೆಕ್ರೆಟಿ ಆಫ್ ಸ್ಟೇಟ್​ ಫಾರ್ ಸೌತ್ ಅಂಡ್​ ಸೆಂಟ್ರಲ್​ ಏಷ್ಯನ್​ ಅಫೇರ್ಸ್ ಆಗಿದ್ದಾರೆ​.. ಅಂದ್ರೆ ದಕ್ಷಿಣ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ವಿಚಾರಗಳನ್ನ ನೋಡಿಕೊಳ್ಳೋಕೆ ಇರೋ ಅಸಿಸ್ಟೆಂಟ್​ ಸೆಕ್ರೆಟರಿ ಆಫ್ ಸ್ಟೇಟ್​. ಪಾಕ್​ನ ನ್ಯಾಷನಲ್ ಅಸೆಂಬ್ಲಿಯಲ್ಲಿ ವಿಪಕ್ಷಗಳು ಮಂಡಿಸಿರೋ ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್​ ಖಾನ್​ ಏನಾದ್ರೂ ಬಚಾವ್​​ ಆದ್ರೆ ಅದರ ಪರಿಣಾಮಗಳನ್ನ ಎದುರಿಸಬೇಕಾಗಬಹುದು ಅಂತ ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಆಗಿರೋ ಅಸಾದ್​ ಮಜೀದ್​​ ಖಾನ್​ಗೆ ಮೀಟಿಂಗ್​ವೊಂದರಲ್ಲಿ ಬೆದರಿಕೆ ಸಂದೇಶ ರವಾನಿಸಿದ್ರು ಈ ಡೊನಾಲ್ಡ್​ ಲು ಅಂತ ಇಮ್ರಾನ್​ ಖಾನ್​ ಹೇಳಿದ್ದಾರೆ. ಡೊನಾಲ್ಡ್ ಲು ಈ ಹಿಂದೆ ಕಿರ್ಗಿಸ್ತಾನ ಮತ್ತು ಅಲ್ಬೇನಿಯಾಗೆ ಅಮೆರಿಕದ ರಾಯಭಾರಿಯಾಗಿದ್ರು. 2021ರಲ್ಲಿ ಬೈಡೆನ್​ ಸರ್ಕಾರ ಅಸಿಸ್ಟೆಂಟ್​ ಸೆಕ್ರೆಟಿ ಆಫ್ ಸ್ಟೇಟ್​ ಫಾರ್ ಸೌತ್ ಅಂಡ್​ ಸೆಂಟ್ರಲ್​ ಏಷ್ಯನ್​ ಅಫೇರ್ಸ್ ಆಗಿ ನೇಮಿಸ್ತು.

-masthmagaa.com

Contact Us for Advertisement

Leave a Reply