ಪಾಕ್‌ನಲ್ಲಿ ಭಾರತ ಹತ್ಯೆ ನಡೆಸ್ತಿದೆ! ಎಚ್ಚರಿಕೆ ನೀಡಿದ ಇಮ್ರಾನ್‌ ಖಾನ್‌!

masthmagaa.com:

ಪಾಕ್‌ನಲ್ಲಿರೋ ಉಗ್ರರನ್ನ ಭಾರತದ ಏಜೆಂಟ್ಸ್‌ ಹತ್ಯೆ ಮಾಡ್ತಿರೋ ಬಗ್ಗೆ ಇದೀಗ ಪಾಕ್‌ ಮಾಜಿ ಪ್ರಧಾನಿ… ಸದ್ಯ ಪಾಕ್‌ ಜೈಲಿನಲ್ಲಿ ದಿನ ಕಳೀತಿರೋ ಇಮ್ರಾನ್‌ ಖಾನ್‌ ಮಾತನಾಡಿದ್ದಾರೆ. ಜೈಲಿನಲ್ಲೇ ಕೂತು ಬ್ರಿಟನ್‌ನ ʻಡೈಲಿ ಟೆಲಿಗ್ರಾಫ್‌ʼ ದಿನಪತ್ರಿಕೆಯ ಕಾಲಮ್‌ನಲ್ಲಿ ಬರೆದಿರೋ ಅವ್ರು, ಪಕ್ಕದ ಭಾರತ ಮತ್ತು ಅಫ್ಘಾನಿಸ್ತಾನದಿಂದ ಪಾಕ್‌ಗೆ ಅಪಾಯವಿದೆ ಅಂತ ಎಚ್ಚರಿಕೆ ನೀಡಿದ್ದಾರೆ. ʻ1971ರಲ್ಲಿ ತುಳಿದ ಹಾದಿಯನ್ನೇ ಪಾಕ್‌ ಮತ್ತೊಮ್ಮೆ ತುಳಿತಾ ಇದೆ…. ಆ ಟೈಮ್‌ಲ್ಲಿ ಪಾಕ್‌, ಬಾಂಗ್ಲಾದೇಶವನ್ನ ಕಳೆದುಕೊಂಡಿತ್ತು. ಇನ್ನು ಪಾಕ್‌ ನೆಲದಲ್ಲಿ ಹತ್ಯೆಗಳನ್ನ ನಡೆಸಿರೋ ಬಗ್ಗೆ ಭಾರತ ಈಗಾಗಲೇ ಹೇಳ್ಕೊಂಡಿದೆʼ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನೊಂದ್ಕಡೆ ಭಾರತದಲ್ಲೇ ಹುಟ್ಟಿ…ಜಗತ್‌ಪ್ರಸಿದ್ದಿ ಹೊಂದಿರೋ ಯೋಗಾಭ್ಯಾಸ ಮಾಡೋಕೆ ಇದೀಗ ಪಕ್ಕದ ಪಾಕಿಸ್ತಾನ… ಭಾರತವನ್ನ ವಿರೋಧಿಸೋ ಪಾಕಿಸ್ತಾನ ಕೂಡ ಶುರು ಮಾಡಿದೆ. ಅಲ್ಲಿನ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಅಥಾರಿಟಿ…ಸರ್ಕಾರಿ ಇಲಾಖೆ… ಇದೀಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಫ್ರೀ ಯೋಗ ಕ್ಲಾಸ್‌ನ್ನ ಲಾಂಚ್‌ ಮಾಡಿದೆ.

-masthmagaa.com

Contact Us for Advertisement

Leave a Reply