ಖಾನ್ ಸರ್ಕಾರ ಉರುಳಿಸು ಅಮೆರಿಕ ತಂತ್ರ!

masthmagaa.com:

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ಬೀಳಿಸಲು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಪ್ರಯತ್ನಿಸ್ತಿವೆಯಾ..? ಈ ಪ್ರಶ್ನೆಗೆ ಕಾರಣವಾಗಿದ್ದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​​​ ಇತ್ತೀಚೆಗೆ ಆಡಿರೋ ಕೆಲವೊಂದು ಮಾತುಗಳು.. ಇತ್ತೀಚೆಗೆ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಭಾರಿ ಬೆಳವಣಿಗೆ ನಡೀತಾ ಇವೆ. ಇದಕ್ಕೆಲ್ಲಾ ವಿದೇಶಿ ಶಕ್ತಿಗಳೇ ಕಾರಣ.. ವಿದೇಶದಿಂದ ನಮ್ಮ ಸರ್ಕಾರ ಉರುಳಿಸಲು ಫಂಡ್ ಹರಿದು ಬರ್ತಿದೆ ಅಂತ ಇಮ್ರಾನ್ ಖಾನ್ ಸರ್ಕಾರದ ಸಚಿವರು ಆರೋಪಿಸಿದ್ರು. ಅದಕ್ಕೆ ಸಾಕ್ಷ್ಯ ಇದೆ ಅಂತ ಕೂಡ ಹೇಳಿದ್ರು. ಹಾಗಾದ್ರೆ ಆ ಸಾಕ್ಷ್ಯಗಳನ್ನು ಬಹಿರಂಗಪಡಿಸಿ ಅಂತ ವಿಪಕ್ಷಗಳು ಒತ್ತಾಯಿಸಿದ್ವು. ಅದ್ರ ಬೆನ್ನಲ್ಲೇ ಇಮ್ರಾನ್ ಖಾನ್ ಮಾಧ್ಯಮಗಳ ಮುಂದೆ ಒಂದಷ್ಟು ದಾಖಲೆಗಳನ್ನು ಬಿಚ್ಚಿಡೋ ಪ್ರಯತ್ನ ಮಾಡಿದ್ದಾರೆ. ಜೊತೆಗೆ ನಾವು ವಿದೇಶದಲ್ಲಿರುವ ನಮ್ಮ ರಾಯಭಾರಿಗಳ ಜೊತೆ ಚರ್ಚೆ ಮಾಡಿದ್ದು, ವಿದೇಶಿ ಫಂಡ್ ಪಾಕಿಸ್ತಾನಕ್ಕೆ ಹರಿದು ಬಂದಿರೋ ಬಗ್ಗೆ ಬಗ್ಗೆ ನಮಗೆ ಅವರೇ ಎಲ್ಲಾ ಮಾಹಿತಿಯನ್ನ ನೀಡಿದ್ದಾರೆ ಅಂತ ಹೇಳಿದ್ದಾರೆ. ಆದ್ರೆ ಫಂಡಿಂಗ್‌ ಮಾಡ್ತಿದ್ದ ದೇಶ ಯಾವುದು ಅನ್ನೋ ಪ್ರಶ್ನೆಗೆ ಮಾತ್ರ ಇಮ್ರಾನ್‌ ತುಟಿ ಬಿಚ್ಚಲಿಲ್ಲ. ಆದ್ರೆ ಯುಕ್ರೇನ್ ವಿಚಾರದಲ್ಲಿ ಪಾಕಿಸ್ತಾನದ ನಿಲುವು ಮತ್ತು ರಷ್ಯಾ ಜೊತೆಗಿನ ಸ್ನೇಹವನ್ನು ಸಹಿಸದ ದೇಶಗಳ ಇದ್ರ ಹಿಂದಿದೆ ಅಂತ ಪರೋಕ್ಷವಾಗಿ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳತ್ತ ಬೊಟ್ಟು ಮಾಡಿದ್ದಾರೆ. ಯೆಸ್​.. ಯುಕ್ರೇನ್​​​​ ಮೇಲೆ ರಷ್ಯಾ ದಾಳಿಯನ್ನು ಪಾಕಿಸ್ತಾನ ಖಂಡಿಸಿಲ್ಲ.. ಅದೇ ರೀತಿ ರಷ್ಯಾದ ಜೊತೆಗೂ ಕ್ಲೋಸ್ ಆಗೇ ಇದೆ.. ಇದನ್ನು ಸಹಿಸದವರು ಅಂದ್ರೆ ಬೇರೆ ಯಾರಿದ್ದಾರೆ.. ಅದೇ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು.. ಹೀಗಾಗಿ ಇಮ್ರಾನ್ ಖಾನ್ ಹೆಸರು ಹೇಳದೇ ಪಾಕಿಸ್ತಾನದಲ್ಲಿ ನಡೀತಿರೋ ರಾಜಕೀಯ ಬೆಳವಣಿಗೆಗಳಿಗೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳೇ ಕಾರಣ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ. ಅಂದಹಾಗೆ ಅಮೆರಿಕ ಮತ್ತು ಪಾಕಿಸ್ತಾನದ ಸಂಬಂಧ ಹಳಸೋಕೆ ಶುರುವಾಗಿ ತುಂಬಾ ಟೈಂ ಆಗಿದೆ. ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗಲೂ ಪಾಕಿಸ್ತಾನಕ್ಕೆ ಕ್ಯಾರೆ ಅನ್ಲಿಲ್ಲ… ಅದೇ ರೀತಿ ಬೈಡೆನ್ ಬಂದ್ಮೇಲೂ ಇಮ್ರಾನ್ ಖಾನ್​​ರನ್ನು ಲೆಕ್ಕಕ್ಕೇ ತಗೊಳ್ಲಿಲ್ಲ.. ಹೀಗಾಗಿ ಪಾಕಿಸ್ತಾನ ಚೀನಾ ಮತ್ತು ರಷ್ಯಾಗೆ ಹತ್ತಿರವಾಗ್ತಾ ಸಾಗಿದೆ.

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ, ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿರೋದ್ರ ಹಿಂದೆ ನಮ್ಮ ಪಾತ್ರ ಇಲ್ಲ.. ಈ ಆರೋಪಗಳೆಲ್ಲಾ ಸುಳ್ಳು ಅಂತ ಹೇಳಿದೆ..

-masthmagaa.com

Contact Us for Advertisement

Leave a Reply