ಪಾಕಿಸ್ತಾನ್ ಹೈಡ್ರಾಮಾ! ಇಮ್ರಾನ್ ನಾಟಕಕ್ಕೆ ಸುಪ್ರೀಂ ಕೋರ್ಟ್ ಶಾಕ್?

masthmagaa.com:

ದೇಶದ ನ್ಯಾಶನಲ್ ಅಸೆಂಬ್ಲಿಯನ್ನ ವಿಸರ್ಜಿಸಿದ ಇಮ್ರಾನ್ ಖಾನ್ ಸರ್ಕಾರದ ನಿರ್ಧಾರದ ಬಗ್ಗೆ ಈಗ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಎಂಟ್ರಿ ಕೊಟ್ಟಿದೆ. ಈ ಸಡನ್ ರಾಜಕೀಯ ಬೆಳವಣಿಗೆಯನ್ನ ಸ್ವಯಂಪ್ರೇರಿತವಾಗಿ ಸುಪ್ರೀಂಕೋರ್ಟ್ ತನ್ನ ಗಮನಕ್ಕೆ ತೆಗೆದುಕೊಂಡಿದೆ. ಮುಂದೆ ಸುಪ್ರೀಂ ಈ ವಿಚಾರದಲ್ಲಿ ಏನು ಮಾಡಲಿದೆ ಅನ್ನೋದನ್ನ ಕೆಲ ಸಮಯದ ಬಳಿಕ ತಿಳಿಸಲಾಗುತ್ತೆ ಅಂತ ಆಫೀಸ್ ಆಫ್ ಪಾಕಿಸ್ತಾನ್ ಚೀಫ್ ಜಸ್ಟಿಸ್ / ಅಂದ್ರೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ತಿಳಿಸಿದೆ. ಇದಕ್ಕೂ ಮೊದಲು ವಿಶ್ವಾಸಮತದಲ್ಲಿ ಸೋಲುವ ಭೀತಿಯಿಂದ ಇಮ್ರಾನ್ ಖಾನ್ ಅಸೆಂಬ್ಲಿಯನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವ ಘೋಷಣೆ ಮಾಡಿದ್ರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷಗಳು ಸುಪ್ರೀಂಕೋರ್ಟ್ಗೆ ಹೋಗ್ತೀವಿ ಅಂದಿದ್ದವು. ಇಂತಾ ಹೊತ್ತಲ್ಲಿ ಪಾಕ್ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರವನ್ನ ಕೈಗೆತ್ತಿಕೊಂಡಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಈ ನಡುವೆ ಪಾಕ್ ನಾಟಕದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಕೈವಾಡ ಇದೆ ಅಂತಾ ರೊಚ್ಚಿಗೆದ್ದ ಇಮ್ರಾನ್ ಖಾನ್ ಬೆಂಬಲಿಗನೊಬ್ಬ ಲಂಡನ್ ನಲ್ಲಿರೋ ಷರೀಫ್ ಮೇಲೆ ದಾಳಿ ಮಾಡಿದ್ದಾನೆ ಅಂತ ವರದಿಯಾಗಿದೆ.

-masthmagaa.com

 

Contact Us for Advertisement

Leave a Reply