ಪಾಕ್​​ಗೆ ಮುಂದಿನ ಪ್ರಧಾನಿ ಶಹಬ್ಬಾಸ್ ಷರೀಫ್?

masthmagaa.com:

ವಿಶ್ವಾಸಮತ ಯಾಚನೆ ಬಳಿಕ ಪಾಕಿಸ್ತಾನ ಅಸೆಂಬ್ಲಿ ಅಧಿವೇಶನವನ್ನು ಸೋಮವಾರಕ್ಕೆ ಅಂದ್ರೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 2 ಗಂಟೆಗೆ ಅಧಿವೇಶನ ಶುರುವಾಗಲಿದ್ದು, ಪಾಕಿಸ್ತಾನ್ ಮುಸ್ಲಿಂ ಲೀಗ್​ ನವಾಜ್​​ನ ಆಯಾಜ್ ಸಾದಿಕ್ ಸಭಾಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಜೊತೆಗೆ ಹೊಸ ಪ್ರಧಾನಿಯನ್ನು ಕೂಡ ಆಯ್ಕೆ ಮಾಡಲಾಗುತ್ತೆ. ಸದ್ಯ ವಿಪಕ್ಷ ನಾಯಕರಾಗಿರೋ ಶೆಹಬಾಸ್​ ಷರೀಫ್​​​ ಪ್ರಧಾನಿಯಾಗಿ ಆಯ್ಕೆಯಾಗೋ ಎಲ್ಲಾ ಸಾಧ್ಯತೆಗಳಿವೆ. ಇವರು ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರನಾಗಿದ್ದು, ಪಾಕಿಸ್ತಾನದ ಹೊರಗಡೆ ಇವರ ಬಗ್ಗೆ ಜಾಸ್ತಿ ಗೊತ್ತಿಲ್ಲವಾದ್ರೂ ದೇಶದೊಳಗೆ ಉತ್ತಮ ಆಡಳಿತಗಾರ ಅನ್ನೋ ಹೆಸರಿಗೆ ಪಾತ್ರರಾಗಿದ್ದಾರೆ. 70 ವರ್ಷದ ಇವರು ಇಮ್ರಾನ್ ಖಾನ್ ಸರ್ಕಾರ ಉರುಳಿಸುವಲ್ಲಿ, ವಿಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಪಂಜಾಬ್ ಸಿಎಂ ಆಗಿ ಕೆಲಸ ಮಾಡಿರೋ ಅನುಭವ ಹೊಂದಿರೋ ಇವರು, ಚೀನಾ ಬಂಡವಾಳ ಹೂಡಿಕೆಯ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಚೀನಾದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. 1999ರಲ್ಲಿ ಪಾಕಿಸ್ತಾನದಲ್ಲಿ ಮಿಲಿಟರಿ ಕ್ರಾಂತಿಯಾದಾಗ ಇವರನ್ನು ಬಂಧನದಲ್ಲಿಡಲಾಗಿತ್ತು. ನಂತರದಲ್ಲಿ ಸೌದಿ ಅರೇಬಿಯಾಗೆ ಗಡೀಪಾರು ಮಾಡಲಾಗಿತ್ತು. 2007ರಲ್ಲಿ ಮತ್ತೆ ಪಾಕಿಸ್ತಾನಕ್ಕೆ ಮರಳಿದ ಶಹಬ್ಬಾಸ್ ಷರೀಫ್​​​​​​​, 2017ರಲ್ಲಿ ಪ್ರಧಾನಿಯಾಗಿದ್ದ ನವಾಜ್ ಷರೀಫ್​​ ಜೈಲಿಗೆ ಹೋದ್ಮೇಲೆ ಪಿಎಂಎಲ್​ಎನ್​​ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡ್ರು. ಇದಾದ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ರಾಜಕೀಯಕ್ಕೆ ಶಹಬ್ಬಾಸ್ ಷರೀಫ್​ ಎಂಟ್ರಿಯಾಯ್ತು.

-masthmagaa.com

Contact Us for Advertisement

Leave a Reply