ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಹೇಳಿದ್ದೇನು..?

ಕರ್ಫ್ಯೂ ತೆಗೆದ್ರೆ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಯಲಿದೆ ಅಂತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಧಟತನದ ಮಾತಾಡಿದ್ದಾರೆ. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಅಣ್ವಸ್ತ್ರಗಳನ್ನು ಹೊಂದಿರುವ ಭಾರತ-ಪಾಕಿಸ್ತಾನ ನಡುವೆ ಯುದ್ಧ ಆದ್ರೆ ಇತರ ದೇಶಗಳ ಮೇಲೂ ಅದರ ಪರಿಣಾಮ ಆಗಲಿದೆ. ಪಕ್ಕದ ದೇಶಕ್ಕಿಂತ 7 ಪಟ್ಟು ಚಿಕ್ಕದಾಗಿರುವ ದೇಶಕ್ಕೆ ಶರಣಾಗತಿ ಅಥವಾ ಕೊನೆಯವರೆಗೆ ಹೋರಾಟದ ಆಯ್ಕೆಗಳು ಮಾತ್ರ ಇದ್ದರೆ ನೀವು ಏನು ಮಾಡ್ತೀರಿ..? ಅಣ್ವಸ್ತ್ರ ಇರುವ ದೇಶವೊಂದು ಕೊನೆಯವರೆಗೆ ಹೋರಾಡಿದರೆ ಅದರ ಪರಿಣಾಮ ಗಡಿಗಳನ್ನು ಮೀರಿ ಸಾಗುತ್ತದೆ ಅಂತ ಹೇಳಿದ್ದಾರೆ. ಈ ಮೂಲಕ ಯುದ್ಧ ನಡೆದ್ರೆ ಸೋಲೋ ಸಂದರ್ಭ ಬಂದಾಗ ಅಣ್ವಸ್ತ್ರ ಬಳಸುತ್ತೇವೆ ಎಂಬುದಾಗಿ ಪರೋಕ್ಷವಾಗಿ ನುಡಿದಿದ್ದಾರೆ. ನಾನು ಕಾಶ್ಮೀರದಲ್ಲಿ ಇದ್ದಂತೆ ಕಲ್ಪಿಸಿಕೊಳ್ಳುತ್ತಿದ್ದೇನೆ. 55 ದಿನಗಳವರೆಗೆ ನನ್ನನ್ನು ಕೂಡಿಡಲಾಗಿದೆ. ಈ ರೀತಿ ಎಲ್ಲಾ ಅವಮಾನದಲ್ಲಿ ಬದುಕಲು ನಾನು ಬಯಸುತ್ತೇನೆಯೇ? ಅಂತಹ ಸಂದರ್ಭದಲ್ಲಿ ನಾನು ಬಂದೂಕು ಕೈಗೆತ್ತಿಕೊಳ್ಳುತ್ತೇನೆ. ಜನರು ಉಗ್ರವಾದದತ್ತ ಸಾಗುವಂತೆ ನೀವೇ ಬಲವಂತ ಮಾಡುತ್ತಿದ್ದೀರಿ. ಕಾಶ್ಮೀರದಲ್ಲಿ ಕರ್ಫ್ಯೂ ತೆಗೆದು ಬಂಧನದಲ್ಲಿ ಇರುವವರನ್ನು ಬಿಡುಗಡೆ ಮಾಡಬೇಕು ಅಂತ ಇಮ್ರಾನ್ ಒತ್ತಾಯಿಸಿದ್ರು.

Contact Us for Advertisement

Leave a Reply