ಉಜ್ಬೇಕಿಸ್ತಾನದಲ್ಲಿ ಶಾಲೆಗಳಲ್ಲಿ ಹಿಜಬ್ ಬ್ಯಾನ್ ತೆರವು!

masthmagaa.com:

ಉಜ್ಬೇಕಿಸ್ತಾನದ ಶಾಲೆಗಳಲ್ಲಿ ಹುಡುಗಿಯರು ಧರಿಸುತ್ತಿದ್ದ ಹೆಡ್​ ಸ್ಕಾರ್ಫ್​ ಅಂದ್ರೆ ಶಿರವಸ್ತ್ರದ ಮೇಲಿನ ಬ್ಯಾನ್ ತೆಗೆಯಲಾಗಿದೆ. ಯಾಕಂದ್ರೆ ಉಜ್ಬೇಕಿಸ್ತಾನ ಒಂದು ಮುಸ್ಲಿಂ ದೇಶವಾಗಿದ್ದು, ಮುಸ್ಲಿಮರಲ್ಲಿ ಹುಡುಗಿಯರು ಶಿರವಸ್ತ್ರ ಧರಿಸೋದು ಕಡ್ಢಾಯವಾಗಿದೆ. ಆದ್ರೆ ಉಜ್ಬೇಕಿಸ್ತಾನದಲ್ಲಿ ಅದಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಪೋಷಕರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದುಮುಂದು ನೋಡ್ತಿದ್ರು. ಹೀಗಾಗಿ ಶಿರವಸ್ತ್ರ ಬ್ಯಾನ್ ತೆಗೆಯಲಾಗ್ತಿದೆ. ಹುಡುಗಿಯರು ಬಿಳಿ ಅಥವಾ ಯಾವುದೇ ಲೈಟ್​ ಕಲರ್​ ಇರೋ ಶಿರವಸ್ತ್ರ ಧರಿಸಬಹುದು ಅಂತ ಶಿಕ್ಷಣ ಸಚಿವ ಶೆರ್ಝೋಡ್ ಶೆರ್ಮಟೋವ್​​ ಹೇಳಿದ್ದಾರೆ. ಆದ್ರೆ ಯಾವ ವಯಸ್ಸು ದಾಟಿದವರು ಈ ರೀತಿ ಶಿರವಸ್ತ್ರ ಧರಿಸಬಹುದು ಅನ್ನೋದನ್ನ ಶೆರ್ಮಟೋವ್ ಸ್ಪಷ್ಟಪಡಿಸಿಲ್ಲ. ಅಂದಹಾಗೆ ಉಜ್ಬೇಕಿಸ್ತಾನ ಈ ಹಿಂದೆ ಸೋವಿಯತ್ ಒಕ್ಕೂಟದ ಭಾಗವಾಗಿತ್ತು. ನಂತರ 1992ರಲ್ಲಿ ಸೋವಿಯತ್ ಒಕ್ಕೂಟದ ವಿಘಟನೆಯೊಂದಿಗೆ ಸ್ವತಂತ್ರ ಪಡೆದುಕೊಳ್ತು. ಇಲ್ಲಿ 1989ರಿಂದ 2016ರವರೆಗೆ ಇಸ್ಲಾಂ ಕರಿಮೋವ್ ಅನ್ನೋ ಸರ್ವಾಧಿಕಾರಿ ಅಧಿಕಾರದಲ್ಲಿದ್ರು. 1998ರಲ್ಲಿ ಇವರು ಇಸ್ಲಾಂ ತೀವ್ರವಾದವನ್ನು ತಡೆಯೋದಕ್ಕೆ ಹಲವಾರು ನಿರ್ಬಂಧಗಳನ್ನು ವಿಧಿಸಿದ್ರು. ಪಬ್ಲಿಕ್ ಪ್ಲೇಸ್​ನಲ್ಲಿ ಮಹಿಳೆಯರು ಹಿಜಬ್ ಧರಿಸಂಗಿಲ್ಲ.. ಶಾಲೆಗಳಲ್ಲಿ ಮಕ್ಕಳು ಶಿರವಸ್ತ್ರ ಅಥವಾ ಹಿಜಬ್ ಧರಿಸೋ ಹಾಗಿಲ್ಲ. ಮಸೀದಿಗಳಲ್ಲಿ ದೊಡ್ಡ ಸ್ಪೀಕರ್ ಇಟ್ಟು ಪ್ರಾರ್ಥನೆ ಮಾಡಂಗಿಲ್ಲ. ಮಕ್ಕಳು ಮಸೀದಿಗೆ ಹೋಗಂಗಿಲ್ಲ.. ಹೀಗೆ ಹಲವಾರು ನಿರ್ಬಂಧಗಳನ್ನು ವಿಧಿಸಿದ್ರು. 1999ರಲ್ಲಿ ಇಸ್ಲಾಂ ಮೂಲಭೂತವಾದಿಗಳ ಸಂಘಟನೆ ಇವರ ಹತ್ಯೆಗೂ ಪ್ರಯತ್ನಪಟ್ಟಿತ್ತು. 2016ರಲ್ಲಿ ಇವರ ಸಾವಿನ ಬಳಿಕ ಶೌಕತ್ ಮಿರ್ಝಿಯೋಯೆವ್ ಅಧಿಕಾರಕ್ಕೆ ಬಂದ್ರು. ನಂತರ ಒಂದೊಂದೇ ನಿರ್ಬಂಧಗಳನ್ನು ತೆಗೆಯುತ್ತಾ ಬರಲಾಯ್ತು. ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಹಿಜಬ್ ಧರಿಸಲು ಅವಕಾಶ ನೀಡಲಾಯ್ತು. ಮಕ್ಕಳು ಮಸೀದಿಗೆ ಹೋಗಲು, ಸ್ಪೀಕರ್​​ ಹಾಕಿಕೊಂಡು ಪ್ರಾರ್ಥನೆ ಮಾಡಲು ಅವಕಾಶ ನೀಡಲಾಯ್ತು. ಇದೀಗ ಶಾಲೆಗಳಲ್ಲೂ ಹೆಣ್ಮಕ್ಕಳು ಹಿಜಬ್ ಅಂದ್ರೆ ಶಿರವಸ್ತ್ರ ಧರಿಸಲು ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply