ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಶಶಿತರೂರ್ ಸ್ಪರ್ಧೆ ಖಚಿತ!

masthmagaa.com:

ಕಾಂಗ್ರೆಸ್‌ನ ರೆಬೆಲ್‌ ನಾಯಕ ಶಶಿತರೂರ್‌ ಅಂತಿಮವಾಗಿ ತಾವು ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸೋದನ್ನ ಕನ್ಫಮ್‌ ಮಾಡಿದ್ದಾರೆ. ಇಂದು ಕಾಂಗ್ರೆಸ್‌ನ ಎಲೆಕ್ಷನ್‌ ಕಮಿಷನ್‌ ಚೇರ್ಮನ್‌ ಮಧಸೂದನ್‌ ಮಿಸ್ತ್ರಿಯವರಿಂದ ನಾಮಪತ್ರ ಪಡೆಯೋ ಮೂಲಕ ಅಧಿಕೃತವಾಗಿ ಕಾಂಗ್ರೆಸ್‌ ಅಧ್ಯಕ್ಷರ ರಣಕಣಕ್ಕೆ ಎಂಟ್ರಿಯಾಗಿದ್ದಾರೆ. ಈ ಮೂಲಕ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ಗೆ ನೇರ ಸ್ಪರ್ಧೆ ಒಡ್ಡಲಿದ್ದಾರೆ. ಇತ್ತ ಅಶೋಕ್‌ ಗೆಹ್ಲೋಟ್‌ರಿಂದ ತೆರವಾಗಲಿರೋ ಸಿಎಂ ಕುರ್ಚಿಯನ್ನ ಏರೋಕೆ ಬಿರುಸಿನ ಬೆಳವಣಿಗೆಗಳು ರಾಜಸ್ಥಾನದಲ್ಲಿ ನಡೀತಿವೆ. ಸಚಿನ್‌ ಪೈಲೆಟ್‌ ಮುಂದಿನ ಸಿಎಂ ಸೀಟ್‌ಗೆ ಈಗಾಗಲೇ ಟವಲ್‌ ಹಾಕಿದ್ದು ಅದಕ್ಕಾಗಿ ಈಗ ಗೆಹ್ಲೋಟ್‌ ಬಣದ ಶಾಸಕರನ್ನ ಕೂಡ ಸಂಪರ್ಕ ಮಾಡ್ತಿದ್ದಾರೆ.

-masthmagaa.com

Contact Us for Advertisement

Leave a Reply