ಹಬ್ಬದ ವೇಳೆ ಜನ ಸೇರಂಗಿಲ್ಲ: ಗೃಹಸಚಿವರ ಖಡಕ್ ವಾರ್ನಿಂಗ್

masthmagaa.com:

ಕೊರೋನಾ ಹೆಚ್ಚಳದ ಬೆನ್ನಲ್ಲೇ ಇವತ್ತು ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರು ಮತ್ತು ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದೀರ್ಘ ಸಭೆ ನಡೆಸಿದ್ರು. ಬೇರೆ ರಾಜ್ಯಗಳಿಂದ ಬರ್ತಿರೋರು, ಹೆಚ್ತಿರೋ ಕೊರೋನಾದ ಬಗ್ಗೆ ಮಾಹಿತಿ ಪಡೆದ್ರು. ಬಳಿಕ ಮಾತಾಡಿದ ಗೃಹಸಚಿವ ಅರಗ ಜ್ಞಾನೇಂದ್ರ, ಟೆಸ್ಟ್ ಜಾಸ್ತಿ ಮಾಡೋದು, ಬೂಸ್ಟರ್ ಡೋಸ್ ಅಭಿಯಾನ ವೇಗಗೊಳಿಸೋದು ಮತ್ತು ಹೋಮ್ ಐಸೋಲೇಷನ್​​ಗೆ ಒಳಪಟ್ಟವರ ಮೇಲೆ ನಿಗಾ ಇಡೋದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದ್ವಿ. ಮಕ್ಕಳಲ್ಲಿ ಕೊರೋನಾ ಜಾಸ್ತಿಯಾಗ್ತಿದೆ. ಹಾಸ್ಟೆಲ್​​, ವಸತಿ ಶಾಲೆಗಳಲ್ಲಿ ಕೊರೋನಾ ಜಾಸ್ತಿಯಾಗ್ತಿದೆ. ಹೀಗಾಗಿ ಅವುಗಳನ್ನು ಕಂಟ್ರೋಲ್ ಮಾಡೋದು ಅಥವಾ ಶಾಲೆಯನ್ನು ಬಂದ್ ಮಾಡೋದರ ಬಗ್ಗೆ ಸ್ಥಳೀಯ ಆಡಳಿತವೇ ನಿರ್ಧಾರ ತಗೊಳ್ಳಲಿದೆ ಅಂದ್ರು. ಜೊತೆಗೆ ಮುಂದೆ ವೈಕುಂಠ ಏಕಾದಶಿ, ಮಕರ ಸಂಕ್ರಾಂತಿ ಹಬ್ಬ ಬರ್ತಿದೆ. ಧಾರ್ಮಿಕ ವಿಧಿ ವಿಧಾನಕ್ಕೆ ಅಡ್ಡಿಯಿಲ್ಲ. ಆದ್ರೆ ಜನರನ್ನು ಸೇರಿಸಬಾರದು.. ಈಗ ಮಾರ್ಗಸೂಚಿಯಲ್ಲಿ ಎಷ್ಟು ಜನ ಸೇರಲು ಅವಕಾಶ ಇದ್ಯೋ ಅಷ್ಟು ಜನರಿಗೆ ಮಾತ್ರ ಅವಕಾಶ.. ಕಾನೂನು ಮೀರಿದ್ರೆ ಕೇಸ್ ದಾಖಲಿಸುವಂತೆ ಸೂಚಿಸಲಾಗಿದೆ ಅಂದ್ರು.

-masthmagaa.com

Contact Us for Advertisement

Leave a Reply