ವಿಡಿಯೋ: ಐಸಿಯುನಲ್ಲಿ ಗುಡ್​ಬೈ ಹೇಳಿಕೊಂಡ ಕೊರೋನಾವೈರಸ್ ಪೀಡಿತ ವೃದ್ಧ ದಂಪತಿ..!

ಚೀನಾ: ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಚೀನಾದಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ನಡುವೆ ಕೊರೋನಾವೈರಸ್ ಪೀಡಿತ ವೃದ್ಧ ದಂಪತಿಯ ಹೃದಯ ಕಲಕುವ  ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದ್ರಲ್ಲಿ ಐಸಿಯುನಲ್ಲಿರೋ 80ರ ಹರೆಯದ ವೃದ್ಧ ದಂಪತಿ ಪರಸ್ಪರ ಗುಡ್​​ವೈ ಹೇಳಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಈ ವೃದ್ಧ ದಂಪತಿಯ ಮಾತಿನ ಅರ್ಥವೇನು..? ಕೊರೋನಾವೈರಸ್​​​ನಿಂದ ಬಳಲುತ್ತಿರುವ ಈ ವೃದ್ಧ ದಂಪತಿ ಐಸಿಯುನಲ್ಲಿ ಪರಸ್ಪರ ಗುಡ್​ಬೈ ಹೇಳ್ತಿದ್ದಾರೆ. ಇದು ಭೇಟಿ ಮತ್ತು ಮಾತುಕತೆಯ ಕೊನೆಯ ಸಂದರ್ಭವಾಗಿರಬಹುದು ಅಂತ ಬರೆದುಕೊಂಡಿದ್ದಾರೆ. ಈ ವಿಡಿಯೋ ಭಾರಿ ಪ್ರಮಾಣದಲ್ಲಿ ಶೇರ್ ಆಗಿದ್ದು, ಟ್ವಿಟ್ಟರ್ ಬಳಕೆದಾರರು ಕಂಬನಿ ಮಿಡಿದಿದ್ದಾರೆ. ಈ ವೃದ್ಧ ದಂಪತಿಯ ನರಳಾಟ ನೋಡಲು ತುಂಬಾ ಭಯಾನಕವಾಗಿದೆ. ಪರಿಸ್ಥಿತಿ ಕೈಮೀರಿ ಹೋಗಿದೆ ಅನ್ನೋದು ಈ ಪರಿಸ್ಥಿತಿಯಿಂದ ಅರ್ಥವಾಗುತ್ತೆ ಅಂತ ಬರೆದುಕೊಂಡಿದ್ದಾರೆ.

https://twitter.com/i/status/1224102716747796480

Contact Us for Advertisement

Leave a Reply