ಚುನಾವಣೆಯಲ್ಲಿ ಬಿಜೆಪಿ 305 ಸೀಟು ಗೆಲ್ಲುತ್ತೆ: ಅಮೆರಿಕದ ರಾಜನೀತಿಜ್ಞ

masthmagaa.com:

ಭಾರತದ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಯಾರು ಗೆಲ್ಲಬೋದು ಅನ್ನೋ ಕುತೂಹಲಗಳ ನಡುವೆಯೇ ಅಮೆರಿಕದ ರಾಜನೀತಿಜ್ಞ, ಯುರೇಷ್ಯನ್‌ ಗ್ರೂಪ್‌ ಫೌಂಡರ್‌, ಇಯಾನ್‌ ಬ್ರಮ್ಮರ್‌ ಇಂಟ್ರಸ್ಟಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ಈ ಸಲದ ಚುನಾವಣೆಯಲ್ಲಿ ಬಿಜೆಪಿ ಸುಮಾರು 305 ಸೀಟ್‌ಗಳಲ್ಲಿ ಗೆಲುವು ಸಾಧಿಸುತ್ತೆ ಅಂತೇಳಿದ್ದಾರೆ. ಎನ್‌ಡಿ ಟಿವಿಗೆ ಕೊಟ್ಟ ಸಂದರ್ಶನದಲ್ಲಿ ಈ ಬಗ್ಗೆ ಮಾತಾಡಿದ್ದು, ʻಮೋದಿ ಸರ್ಕಾರ ಆರ್ಥಿಕತೆಯನ್ನ ಚೆನ್ನಾಗಿ ಮ್ಯಾನೇಜ್ ಮಾಡಿದೆ. ಅದು ಅವರು ಮೂರನೇ ಸಲವೂ ಅಧಿಕಾರಕ್ಕೆ ಬರೋಕೆ ಹೆಲ್ಪ್‌ ಮಾಡುತ್ತೆ. ಯುರೇಷ್ಯನ್‌ ಗ್ರೂಪ್‌ ಮಾಡಿರೋ ರಿಸರ್ಚ್‌ ಪ್ರಕಾರ ಬಿಜೆಪಿ ಸುಮಾರು 295ರಿಂದ 315 ಸೀಟು ಬರುತ್ತೆ ಅಂತೇಳ್ತಿದ್ದಾರೆ. ಇದರಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾಗಬೋದು. ನನ್ನ ಪ್ರಕಾರ ಸುಮಾರು 305 ಸೀಟು ಬರುತ್ತೆ ಅಂತೇಳಿದ್ದಾರೆ. ಜೊತೆಗೆ ಮುಂದಿನ ವರ್ಷ ಭಾರತ 4ನೇ ಆರ್ಥಿಕತೆ ಆಗಬೋದು ಅಂತ ಹೇಳ್ತಿದ್ದಾರೆ. 2028ಕ್ಕೆ ಭಾರತ ಮೂರನೇ ಆರ್ಥಿಕತೆ ಆಗಬೋದು. ಭಾರತ ಇನ್ನಿತರ ದೇಶಗಳ ಜೊತೆಗೆ ಸಂಬಂಧ ಚೆನ್ನಾಗಿ ಇಟ್ಕೊಂಡು ಇನ್ನಷ್ಟು ಪವರ್‌ಫುಲ್‌ ಆಗೋದನ್ನ ನಾವು ನೋಡ್ತೇವೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply