ಮಲಯಾಳಂ ಚಿತ್ರರಂಗದಲ್ಲಿ ಜಾಸ್ತಿ ಆಯ್ತು ಮಾದಕ ಡ್ರಗ್ಸ್‌ ಹಾವಳಿ !

masthmagaa.com:

ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಾಗಿದೆ. ಮಾಲಿವುಡ್‌ನಲ್ಲಿ ಡ್ರಗ್ಸ್‌ ಸೇವನೆ ಹೆಚ್ಚುತ್ತಿದೆ ಎಂದು ಇತ್ತೀಚೆಗಷ್ಟೆ ಸ್ವತಃ ಮಲಯಾಳಂ ನಟರೆ ಹೇಳಿದ್ದರು. ಇನ್ನು ಮಾಲಿವುಡ್‌ ಚಿತ್ರತಂಡ ಸಂಸ್ಥೆ ಕೂಡ ಇದನ್ನು ಒಪ್ಪಿಕೊಂಡಿತ್ತು. ಈ ಹಿನ್ನಲೆಯಲ್ಲಿ ಮಾಲಿವುಡ್‌ನ ಎಲ್ಲಾ ಸಿನಿಮಾ ಚಿತ್ರೀಕರಣ ಸ್ಥಳಗಳಲ್ಲಿ ಪೊಲೀಸರನ್ನು ನೇಮಿಸಲಾಗಿದೆ. ಈ ವೇಳೆ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಕಂಡು ಬಂದರೆ ತಕ್ಷಣ ದಾಳಿ ನಡೆಸಿ, ಅರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೊಚ್ಚಿ ನಗರ ಪೊಲೀಸ್‌ ಆಯುಕ್ತ ಕೆ. ಸೇತು ರಾಮನ್‌ ಹೇಳಿದ್ದಾರೆ.

ಇತ್ತೇಚೆಗೆ ಕೇರಳ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ಟಿನಿ ಟಾಮ್‌ ʻನನ್ನ ಮಗನಿಗೆ ಖ್ಯಾತ ನಟರೊಂದಿಗೆ ನಟಿಸುವ ಅವಕಾಶ ಸಿಕ್ಕಿತ್ತು, ಶೂಟಿಂಗ್‌ ಸ್ಥಳಗಳಲ್ಲಿ ಡ್ರಗ್ಸ್‌ ಸೇವನೆ ಹೆಚ್ಚಾಗುತ್ತಿದೆ. ಹೀಗಾಗಿ ನಾನು ನನ್ನ ಮಗನನ್ನು ಶೂಟಿಂಗ್‌ಗೆ ಕಳುಹಿಸಲಿಲ್ಲ. ನನಗೆ ಇರುವುದು ಒಬ್ಬನೆ ಮಗ ʼ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಎಚ್ಚೆತ್ತ ಪೊಲೀಸರು ಮಾಲಿವುಡ್‌ ಮೇಲೆ ಮತ್ತಷ್ಟು ನಿಗಾ ವಹಿಸಿದ್ದರು. ಹೀಗಾಗಿ ಮಾಲಿವುಡ್‌ನ ಸಿನಿಮಾ ಚಿತ್ರೀಕರಣದ ವೇಳೆ ಪೊಲೀಸರು ಭಾಗಿಯಾಗಿದ್ದಾರೆ.

ನಿರ್ಮಾಪಕ ರಂಜಿತ್‌ , ನಟ ಶೇನ್‌ ನಿಗಮ್‌ ಹಾಗೂ ಶ್ರೀನಾಥ್‌ ಭಾಸಿ ಅವರ ಹೆಸರು ಡ್ರಗ್ಸ್‌ ವಿಚಾರವಾಗಿ ಹೆಚ್ಚು ಕೇಳಿಬರುತ್ತಿದೆ. ಚಿತ್ರೀಕರಣದ ವೇಳೆ ಇವರಿಂದ ಹೆಚ್ಚು ತೊಂದರೆಯಾಗುತ್ತಿದೆ. ಇವರ ವರ್ತನೆ ಮಿತಿಮಿರಿದೆ ಚಿತ್ರರಂಗಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಲಯಾಳಂ ಚಿತ್ರರಂಗ ಒಕ್ಕೂಟ ಹೇಳಿತ್ತು. ಹೀಗಾಗಿ ಈ ಇಬ್ಬರು ನಟರನ್ನು ಸಿನಿಮಾರಂಗದಿಂದ ಬ್ಯಾನ್‌ ಮಾಡಲಾಗಿದೆ.

ಇನ್ನು ಸಿನಿಮಾ ಶೂಟಿಂಗ್‌ ವೇಳೆ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ತಡೆದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮಲಯಾಳಂ ಚಿತ್ರರಂಗ ಒಕ್ಕೂಟ ಪೊಲೀಸರಿಗೆ ಮನವಿ ಮಾಡಿದೆ.

-masthmagaa.com

Contact Us for Advertisement

Leave a Reply