ಹೊಸ ವರ್ಷದಲ್ಲಿ ಸಮಸ್ಯೆಗಳು ದೂರಾಗುತ್ತೆ ಅಂತ ನಾನು ಹೇಳೊದಿಲ್ಲ: ರಿಷಿ ಸುನಾಕ್‌

masthmagaa.com:

ಬ್ರಿಟನ್‌ನ ಪ್ರಧಾನಿ ರಿಷಿ ಸುನಾಕ್‌ ತಮ್ಮ ದೇಶದ ಜನ್ರಿಗೆ ಹೊಸ ವರ್ಷದ ಶುಭಾಷಯ ಹೇಳಿದಾರೆ. ಹೊಸ ವರ್ಷದಲ್ಲಿ ನಮ್ಮ ಎಲ್ಲಾ ಸಮಸ್ಯೆಗಳು ದೂರ ಆಗ್ತವೆ ಅಂತ ನಾನು ಸುಳ್ಳು ಹೇಳಲ್ಲ. ಆದ್ರೆ 2023 ನಮಗೆ ಹೊಸ ಅವಕಾಶಗಳನ್ನ ತರುತ್ತೆ ಅಂತ ಸುನಾಕ್‌ ಹೇಳಿದ್ದಾರೆ. ಜಗತ್ತು ಕೋವಿಡ್‌ ಪ್ಯಾಂಡೆಮಿಕ್‌ನಿಂದ ಚೇತರಿಕೆ ಕಾಣ್ತಿರೋ ಹೊತ್ತಲ್ಲೇ ರಷ್ಯಾ, ಯುಕ್ರೇನ್‌ ಮೇಲೆ ದಾಳಿ ಮಾಡ್ತು. ಇದ್ರಿಂದ ಜಗತ್ತಿನಾದ್ಯಂತ ಆರ್ಥಿಕತೆ ಮೇಲೆ ಪರಿಣಾಮ ಬೀರ್ತು. ಅದ್ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ ಕೂಡ ಒಂದು. ನನಗೆ ಗೊತ್ತು ತುಂಬಾ ಜನರು ನಿಮ್ಮ ಮನೆಗಳಲ್ಲಿ ಅದರ ಪರಿಣಾಮ ಎದುರಿಸ್ತಾ ಇದಿರ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರಕ್ಕೆ ಕಷ್ಟ ಆದ್ರೂ ಪರ್ವಾಗಿಲ್ಲ ಅಂತ ಸಾಲ ತೆಗೆದುಕೊಳ್ಳೋಕೆ ನಿರ್ಧಾರ ಮಾಡಿದೆ. ಇದ್ರಿಂದ ಜನರಿಗೆ ಸಹಾಯ ಮಾಡೋಕೆ ಸಾಧ್ಯವಾಗುತ್ತೆ ಅಂತ ಸುನಾಕ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply