ಭಾರತದ ವಿರುದ್ಧ 131 ಪುಟಗಳ ದಾಖಲೆ ಬಿಡುಗಡೆ ಮಾಡಿದ ಪಾಕ್!

masthmagaa.com:

ಉಗ್ರರಿಗೆ ಭಯೋತ್ಪಾದನೆ ನೀಡೋದ್ರಲ್ಲಿ ಇಡೀ ವಿಶ್ವಕ್ಕೆ ನಾನೇ ಕಿಂಗ್ ಅಂತ ಈಗಾಗಲೇ ತೋರಿಸಿಕೊಟ್ಟಿರೋ ಪಾಕಿಸ್ತಾನ, ಈಗ ಭಾರತದ ವಿರುದ್ಧ ಮತ್ತೊಂದು ನಿರಧಾರ ಆರೋಪ ಮಾಡಿದೆ. ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ, ಎನ್​ಎಸ್​ಎ ಮೊಯೀದ್ ಯೂಸೂಫ್ ಮತ್ತು ಮಾನವಾಧಿಕಾರಕ್ಕೆ ಸಂಬಂಧಿಸಿದ ಸಚಿವೆ ಶಿರಿನ್ ಮಜಾರಿ ಭಾರತದ ವಿರುದ್ಧ 131 ಪುಟಗಳ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದ್ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಸಮಾಧಿ ಮಾಡಲಾಗ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಉಗ್ರರ ಕ್ಯಾಂಪ್ ನಡೆಸಲಾಗ್ತಿದೆ ಅಂತ ಆರೋಪಿಸಲಾಗಿದೆ. ಭಾರತ ಗುಲ್​ಮಾರ್ಗ್​​, ರಾಯಪುರ, ಜೋಧಪುರ, ಚಕರಾತಾ, ಅನೂಪ್​ಗಢ ಮತ್ತು ಬಿಕಾನೇರ್​ನಲ್ಲಿ ಐಎಸ್​ ಉಗ್ರರಿಗೆ ಟ್ರೇನಿಂಗ್ ಕೊಡ್ತಿದೆ ಅಂತ ಕೂಡ ಈ ದಾಖಲೆಯಲ್ಲಿ ಹೇಳಲಾಗಿದೆ. ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ ಮಾತನಾಡಿ, ಕಾಶ್ಮೀರದಲ್ಲಿ ಯಾವ ರೀತಿ ಯೋಚಿಸೋ ಸರ್ಕಾರ ಇದೆ ಅನ್ನೋ ಬಗ್ಗೆ ನಮಗೆ ಕಂಪ್ಲೀಟ್ ಮಾಹಿತಿ ಇದೆ. ಹೀಗಾಗಿ ಪಾಕಿಸ್ತಾನ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಅಂತ ಹೇಳಿಕೊಳ್ಳೋ ಸರ್ಕಾರದ ಅಸಲಿ ಮುಖವನ್ನು ಜಗತ್ತಿನ ಮುಂದೆ ತರಲು ನಿರ್ಧರಿಸಿದೆ. ನಾವೀಗ ಬಿಡುಗಡೆ ಮಾಡಿರೋ ದಾಖಲೆಯಲ್ಲಿ ಕಾಶ್ಮೀರದಲ್ಲಿ ನಡೀತಿರೋ ಕಾನೂನು ಬಾಹಿರ ಹತ್ಯೆಗಳು, ಬಂಧನ, ಚಿತ್ರಹಿಂಸೆ, ಅತ್ಯಾಚಾರ ಮತ್ತು ದೌರ್ಜನ್ಯದ ವಿವರಗಳನ್ನು ಒಳಗೊಂಡಿದೆ ಅಂತ ಹೇಳಿದ್ದಾರೆ. ಜೊತೆಗೆ ಈ ದಾಖಲೆಯನ್ನು ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಮುಂದಿಡ್ತೀವಿ ಅಂತ ಕೂಡ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಆಸಿಮ್ ಇಫ್ತಿಕಾರ್​, ಭಾರತ ಹೀಗೆ ತರಬೇತಿ ಪಡೆದ ಐಎಸ್​ ಉಗ್ರರನ್ನು ಗಡಿಯಲ್ಲಿ ನಿಯೋಜಿಸಿ, ಕಾಶ್ಮೀರದ ಜನರ ಸ್ವಾತಂತ್ರ್ಯ ಹೋರಾಟವನ್ನು ಕೆಡಿಸಲು, ಹತ್ತಿಕ್ಕಲು ಯತ್ನಿಸುತ್ತಿದೆ ಅಂತ ಆರೋಪಿಸಿದ್ದಾರೆ. ಇದೇ ವೇಳೆ ಮಾತನಾಡಿದ ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸೂಫ್​​, ಜಮ್ಮು ಕಾಶ್ಮೀರದಲ್ಲಿ ಏನೇನು ನಡೀತಿದೆ ಅನ್ನೋದರ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ ಇದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಪಾಕಿಸ್ತಾನ ಹೇಳ್ತಿರೋದು ತಪ್ಪು ಅಂತ ನೇರವಾಗಿ ಯಾರೂ ಹೇಳೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ಪಂಜ್​ಶಿರ್​​ನಲ್ಲಿ ತಾಲಿಬಾನಿಗಳಿಗೆ ಪಾಕಿಸ್ತಾನ ಸೇನೆ ಸಪೋರ್ಟ್​ ಮಾಡ್ತಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಕಾಬೂಲ್​ನಲ್ಲಿ ಮಹಿಳೆಯರು ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಕೂಡ ನಡೆಸಿದ್ರು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮುಖ ಉಳಿಸಿಕೊಳ್ಳಲು ಭಾರತದ ವಿರುದ್ಧ ಹೊಸ ಆರೋಪ ಮಾಡ್ತಿದ್ದಾರೆ ಈ ಪಾಕಿಗಳು..

-masthmagaa.com

Contact Us for Advertisement

Leave a Reply