ಪೋಲಿಸರಿಗೆ ಸುಳ್ಳು ಹೇಳಿದ್ದಕ್ಕೆ ಅರೆಸ್ಟ್‌ ಆದ ಭಾರತೀಯರು!

masthmagaa.com:

ಪೊಲೀಸರು ಹುಡುಕಾಟ ನಡೆಸ್ತಿದ್ದ ಇಬ್ಬರು ಆರೋಪಿಗಳಿಗೆ ತಮ್ಮ ಹೋಟೆಲ್‌ಗಳಲ್ಲಿ ಆಶ್ರಯ ಕೊಟ್ಟ ಕಾರಣಕ್ಕಾಗಿ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳು ಅಮೆರಿಕಾದಲ್ಲಿ ಅರೆಸ್ಟ್‌ ಆಗಿದ್ದಾರೆ. ಟೆನಿಸ್ಸೀ ರಾಜ್ಯದಲ್ಲಿ ದಕ್ಷಣಬೆನ್‌ ಪಟೇಲ್‌ ಮತ್ತು ಹರ್ಷಿಲ್‌ ಪಟೇಲ್‌ ಅನ್ನೊವ್ರು, ಇಬ್ಬರು ಮೋಸ್ಟ್‌ ವಾಂಟೆಡ್ ಆರೋಪಿಗಳಿಗೆ ತಮ್ಮ ಹೋಟೆಲ್‌ನಲ್ಲಿ ಅವಿತುಕೊಳ್ಳಲು ಜಾಗ ಕೊಟ್ಟಿದ್ದಾರೆ. ಮಾದಕ ದ್ರವ್ಯ ಸಾಗಾಣಿಕೆ ಆರೋಪ ಹೊತ್ತಿದ್ದ ಈ ಆರೋಪಿಗಳು ಹೊಟೇಲ್‌ ಬಳಿ ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ವಿಚಾರಣೆ ನಡೆಸಿದಾಗ ಹಲವು ದಿನಗಳಿಂದ ಇವ್ರು ಅದೇ ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ರು ಅಂತ ಗೊತ್ತಾಗಿದೆ. ಇದೇ ಕಾರಣಕ್ಕೆ ಭಾರತೀಯ ಮೂಲದ ಹೋಟೆಲ್‌ ಮಾಲೀಕರನ್ನ ಅರೆಸ್ಟ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply