ಕೋವಿಶೀಲ್ಡ್​ ಲಸಿಕೆಗೆ 9 ರಾಷ್ಟ್ರಗಳಿಂದ ‘ಗ್ರೀನ್​ ಪಾಸ್’​.. ಡೆಲ್ಟಾದಿಂದ ರಕ್ಷಣೆ ನೀಡುತ್ತೆ 2 ಡೋಸ್​!

masthmagaa.com:

ಭಾರತದಲ್ಲಿ ಅನುಮೋದನೆ ಪಡೆದಿರೋ ಮತ್ತು ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಉತ್ಪಾದನೆ ಮಾಡ್ತಿರೋ ಕೋವಿಶೀಲ್ಡ್ ಲಸಿಕೆಗೆ ಯುರೋಪಿಯನ್ ಯೂನಿಯನ್​ ಗ್ರೀನ್​ ಪಾಸ್​ ನೀಡದ ಬೆನ್ನಲ್ಲೇ, ಈ ವಿಚಾರದಲ್ಲಿ ಭಾರತಕ್ಕೆ ಮೊದಲ ಗೆಲುವು ಸಿಕ್ಕಂತಾಗಿದೆ. ಜರ್ಮನಿ, ಸ್ಪೇನ್​, ಐರ್​ಲ್ಯಾಂಡ್​, ಐಸ್​ಲ್ಯಾಂಡ್​, ಆಸ್ಟ್ರಿಯಾ, ಗ್ರೀಸ್​, ಸ್ಲೊವೇನಿಯಾ, ಇಸ್ಟೋನಿಯಾ ಮತ್ತು ಸ್ವಿಜರ್​ಲ್ಯಾಂಡ್ – ಈ 9​ ದೇಶಗಳು ಕೋವಿಶೀಲ್ಡ್​ ಅನುಮೋದನೆ ನೀಡಿವೆ. ಇದರಲ್ಲಿ ಸ್ವಿಜರ್​ಲ್ಯಾಂಡ್​ ಮತ್ತು ಐಸ್​ಲ್ಯಾಂಡ್​ ಬಿಟ್ಟು ಉಳಿದೆಲ್ಲವೂ ಯುರೋಪಿಯನ್ ಯೂನಿಯನ್​ನ ಸದಸ್ಯ ರಾಷ್ಟ್ರಗಳು. ಅಂದ್ಹಾಗೆ ಕೋವಿಶೀಲ್ಡ್ ಲಸಿಕೆಯನ್ನ ಯುರೋಪಿಯನ್ ಮೆಡಿಸಿನ್​ ಏಜೆನ್ಸಿಯು ‘ಗ್ರೀನ್​ ಪಾಸ್’​ ಲಿಸ್ಟ್​ನಿಂದ ಹೊರಗಿಟ್ಟಿತ್ತು. ಅಂದ್ರೆ ಈ ಲಸಿಕೆ ಹಾಕಿಸಿಕೊಂಡೋರು ಯುರೋಪ್​ನಲ್ಲಿ ಮುಕ್ತವಾಗಿ ಓಡಾಡೋಕೆ ಅವಕಾಶ ಇರಲಿಲ್ಲ. ಇದರ ಬೆನ್ನಲ್ಲೇ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ – ಎರಡೂ​ ಲಸಿಕೆಗಳನ್ನ ಗ್ರೀನ್​ ಪಾಸ್​ಗೆ ಸೇರಿಸಬೇಕು ಅಂತ ಭಾರತ ಆಗ್ರಹಿಸಿತ್ತು. ಇದಕ್ಕೆ ಪ್ರತಿಯಾಗಿ ಅಂಥಾ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್​ನಿಂದ ವಿನಾಯ್ತಿ ನೀಡೋದಾಗಿ ಹೇಳಿತ್ತು ಅಂತ ಮೂಲಗಳು ಹೇಳಿವೆ. ಇದೀಗ ಈ 9 ದೇಶಗಳು ಕೋವಿಶೀಲ್ಡ್​ಗೆ ಅನುಮೋದನೆ ನೀಡಿವೆ. ಇದರರ್ಥ ಕೋವಿಶೀಲ್ಡ್​ ಲಸಿಕೆ ಹಾಕ್ಕೊಂಡೋರು ಈ 9 ದೇಶಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಓಡಾಡಬಹುದು ಅಂತರ್ಥ. ಇಸ್ಟೋನಿಯಾ ದೇಶವಂತೂ ಭಾರತದ ಎಲ್ಲಾ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಯುರೋಪಿಯನ್ ಮೆಡಿಸಿನ್ ಏಜೆನ್ಸಿಯ ಗ್ರೀನ್​ ಪಾಸ್​ ಲಿಸ್ಟ್​ನಲ್ಲಿರೋದು ನಾಲ್ಕೇ ನಾಲ್ಕು ಲಸಿಕೆ- ಫೈಝರ್, ಮೊಡೆರ್ನಾ, ಜಾನ್ಸನ್​ ಅಂಡ್​ ಜಾನ್ಸನ್ ಮತ್ತು ಯುರೋಪಿನಲ್ಲಿ ಉತ್ಪಾದನೆ ಮಾಡಿ ಮಾರಾಟ ಮಾಡ್ತಿರೋ ಆಸ್ಟ್ರಾಝೆನೆಕಾ ಲಸಿಕೆ. ಈ ಲಸಿಕೆಗೆ ಯುರೋಪ್​ನಲ್ಲಿ ವ್ಯಾಕ್ಸ್​ಝೆರ್​ವಿರಾ ಅಂತ ಹೆಸರಿಡಲಾಗಿದೆ. ಭಾರತದಲ್ಲಿ ಕೋವಿಶೀಲ್ಡ್ ಅಂತ ಕರೀತಾರೆ. ಇನ್ನು ಭಾರತ್​ ಬಯೋಟೆಕ್​ನ ಕೋವಾಕ್ಸಿನ್​ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಕೊಡೋ ಬಗ್ಗೆ ಆಗಸ್ಟ್ ಎರಡನೇ ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ WHOನ ಚೀಫ್​ ಸೈಂಟಿಸ್ಟ್ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ಧಾರೆ. ಇನ್ನು ಕೊರೋನಾ ಲಸಿಕೆಯ ಎರಡು ಡೋಸ್​ ಡೆಲ್ಟಾ ರೂಪಾಂತರಿಯಿಂದ ರಕ್ಷಣೆ ನೀಡಬಹುದು ಅಂತ ಯುರೋಪಿಯನ್​ ಮೆಡಿಸಿನ್ಸ್ ಏಜೆನ್ಸಿ- EMA ಹೇಳಿದೆ.

-masthmagaa.com

Contact Us for Advertisement

Leave a Reply