ಯಡಿಯೂರಪ್ಪ ಆಪ್ತನ ಮೇಲೆ ಐಟಿ ರೇಡ್! ಕಂಪ್ಲೀಟ್ ಮಾಹಿತಿ ಇಲ್ಲಿದೆ…

masthmagaa.com:

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇವತ್ತು ಬೆಂಗಳೂರು ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 50 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಅವುಗಳ ಪೈಕಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಆಪ್ತ ಸಲಹೆಗಾರನಾಗಿದ್ದ ಉಮೇಶ್ ಮನೆ ಕೂಡ ಸೇರಿದೆ. ಈ ವೇಳೆ ಅಘೋಷಿತ ಆಸ್ತಿ, ಅನಧಿಕೃತ ಆದಾಯದ ಕುರಿತು ಪರಿಶೀಲನೆ ನಡೆಸಿದ್ಧಾರೆ. ಈ ಹಿಂದೆ ಬಿಎಂಟಿಸಿಯಲ್ಲಿ ಚಾಲಕನಾಗಿದ್ದ ಉಮೇಶ್, ಶಿವಮೊಗ್ಗದ ಬಿಜೆಪಿ ನಾಯಕ ಆಯನೂರು ಮಂಜುನಾಥ್ ಸಂಪರ್ಕದಿಂದ ರಾಜಕೀಯ ವಲಯಕ್ಕೆ ಬಂದಿದ್ರು. ಯಡಿಯೂರಪ್ಪನವರ ಆಪ್ತ ಸಹಾಯಕನಾಗಿ ಸೇರಿಕೊಂಡಿದ್ರು. ಅಂದಹಾಗೆ ಈ ಉಮೇಶ್ ಉಮೇಶ್ ನೀರಾವರಿ ಗುತ್ತಿಗೆಗಳನ್ನು ನಿರ್ವಹಣೆ ಮಾಡ್ತಿದ್ರು. ಅಲ್ಲದೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದಲ್ಲಿನ ದೊಡ್ಡ ಗುತ್ತಿಗೆದಾರರೊಂದಿಗೆ ನಂಟು ಹೊಂದಿದ್ರು. ಕಾವೇರಿ ಮತ್ತು ಕೃಷ್ಣ ನೀರಾವರಿ ನಿಗಮಗಳ ಗುತ್ತಿಗೆ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಉಮೇಶ್, ದೊಡ್ಡ ಮಟ್ಟದ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿದ್ವು. ಸದ್ಯ ಇವರ ಸಂಪರ್ಕದಲ್ಲಿದ್ದ ಹೈದ್ರಾಬಾದ್ ಮೂಲದ 10 ಗುತ್ತಿಗೆದಾರರ ಮೇಲೂ ನಿಗಾ ಇಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಯಡಿಯೂರಪ್ಪ, ಉಮೇಶ್​ ನನ್ನ ಜೊತೆ ಕೆಲಸ ಮಾಡ್ತಿದ್ದ. ಸತ್ಯ ಏನು ಅನ್ನೋದನ್ನ ಐಟಿ ಅಧಿಕಾರಿಗಳು ತಿಳಿಸಲಿದ್ದಾರೆ. ಆದ್ರೆ ಯಾರೇ ತಪ್ಪು ಮಾಡಿದ್ರೂ ಐಟಿ ಅಧಿಕಾರಿಗಳು ಬಿಡಲ್ಲ. ಕಾನೂನು ಪ್ರಕಾರ ಅವರು ಕ್ರಮ ತಗೊಂಡಿದ್ದಾರೆ, ಮುಂದೆಯೂ ತಗೊಳ್ತಾರೆ. ಏನಕ್ಕೆ ದಾಳಿ ನಡೆದಿದೆ ಗೊತ್ತಿಲ್ಲ. ಐಟಿ ರೇಡ್​ ನಡೀತಾ ಇರುತ್ತೆ. ಇದು ಕೂಡ ಹಾಗೇ ನಡೆದಿದೆ ಎಂದಿದ್ದಾರೆ.

ಈ ಬಗ್ಗೆ ಮೈಸೂರಲ್ಲಿ ಪ್ರತಿಕ್ರಿಯಿಸಿರೋ ಸಿಎಂ ಬಸವರಾಜ್ ಬೊಮ್ಮಾಯಿ, ಈ ಐಟಿ ದಾಳಿಗಳು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply