ಭಾರತಕ್ಕೆ ಟಿ20 ವಿಶ್ವಕಪ್​​ ಸೆಮೀಸ್​​ಗೆ ಹೋಗಲು ಇನ್ನೂ ಅವಕಾಶ ಇದ್ಯಾ?

masthmagaa.com:

ಟಿ-20 ವಿಶ್ವಕಪ್​​ನಲ್ಲಿ ಆರಂಭದ ಎರಡೂ ಮ್ಯಾಚ್​ಗಳನ್ನ ಸೋತಿರೋ ಭಾರತ ಇವತ್ತು ಅಫ್ಘನಿಸ್ತಾನ ವಿರುದ್ಧ ತನ್ನ ಮೂರನೇ ಪಂದ್ಯವನ್ನ ಆಡ್ತಿದೆ. ಟಿ-20 ವಿಶ್ವಕಪ್​​ನ ಎಕ್ಸಿಟ್​ ಡೋರ್​​ನಲ್ಲಿ ನಿಂತಿರೋ ಟೀಂ ಇಂಡಿಯಾ ಸೆಮಿ ಫೈನಲ್​ಗೆ ಹೋಗಲು ಇನ್ನೂ ಚಾನ್ಸಸ್​ ಇದೆ. ಬಟ್​ ಅದು ತುಂಬಾ ಕಷ್ಟ ಮತ್ತು ಸಾಕಷ್ಟು ಲೆಕ್ಕಾಚಾರದ ಮೇಲೆ ನಿಂತಿದೆ. ಇವತ್ತು ಆಫ್ಘನ್​ ವಿರುದ್ಧದ ಮ್ಯಾಚ್​ ಮಾತ್ರವಲ್ಲದೆ, ಮುಂಬರುವ ಸ್ಕಾಟ್​​ಲ್ಯಾಂಡ್​ ಮತ್ತು ನಮೀಬಿಯಾ ವಿರುದ್ಧದ ಮ್ಯಾಚ್​​ಗಳಲ್ಲೂ ಭಾರತ ದೊಡ್ಡ ಅಂತರದ ಗೆಲುವು ಸಾಧಿಸಬೇಕು. ಜೊತೆಗೆ ಅಫ್ಘನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್​​ಲ್ಯಾಂಡ್​ ಪೈಕಿ ಯಾವುದಾದ್ರೂ ಒಂದು ತಂಡ ನ್ಯೂಜಿಲ್ಯಾಂಡ್​ ಅನ್ನ ಸೋಲಿಸಬೇಕು. ಬಟ್​ ಇವತ್ತು ನಡೆದ ನ್ಯೂಜಿಲ್ಯಾಂಡ್​ ವರ್ಸಸ್​ ಸ್ಕಾಟ್​​ಲ್ಯಾಂಡ್​ ಪಂದ್ಯದಲ್ಲಿ ಸ್ಕಾಟ್​​ಲ್ಯಾಂಡ್​ ಜಸ್ಟ್ 16 ರನ್​ಗಳಿಂದ ಸೋತಿದೆ. ಸ್ಕಾಟ್​​ಲ್ಯಾಂಡ್​ ಇನ್ನೊಂದುಸ್ವಲ್ಪ ಟ್ರೈ ಮಾಡಿದ್ರೆ ಕಿವೀಸ್​ ಅನ್ನ ಸೋಲಿಸಬಹುದಿತ್ತು. ಆಗ ಭಾರತಕ್ಕೂ ಈಸಿಯಾಗ್ತಿತ್ತು. ಬಟ್ ಅದು ಇವತ್ತು ಆಗಿಲ್ಲ. ಈಗ ನಮೀಬಿಯಾ ಮತ್ತು ಅಫ್ಘನಿಸ್ತಾನ ಮೇಲೆ ಭಾರತೀಯರು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಅದ್ರಲ್ಲೂ ವಿಶ್ವಕಪ್​​ನಲ್ಲಿ ಉತ್ತಮ ಪ್ರದರ್ಶನ ತೋರ್ತಿರೋ ಅಫ್ಘನಿಸ್ತಾನದ ಮೇಲೆಯೇ ಭಾರತಕ್ಕೆ ಹೆಚ್ಚು ನಿರೀಕ್ಷೆ ಇದೆ. ಅಫ್ಘನಿಸ್ತಾನ ಮತ್ತು ನ್ಯೂಜಿಲ್ಯಾಂಡ್​ ನಡುವೆ ನವೆಂಬರ್ 7ನೇ ತಾರೀಖು ಮ್ಯಾಚ್​ ನಡೆಯಲಿದೆ.

-masthmagaa.com

Contact Us for Advertisement

Leave a Reply